11 ಬಾರಿ ಮೆದುಳಿನ ಶಸ್ತ್ರ ಚಿಕಿತ್ಸೆಗೊಳಪಟ್ಟಿದ್ದ ಖ್ಯಾತ ನಟಿಯನ್ನು ಬಲಿ ಪಡೆದ ಕೊವಿಡ್ 19 - Mahanayaka
10:19 AM Monday 23 - December 2024

11 ಬಾರಿ ಮೆದುಳಿನ ಶಸ್ತ್ರ ಚಿಕಿತ್ಸೆಗೊಳಪಟ್ಟಿದ್ದ ಖ್ಯಾತ ನಟಿಯನ್ನು ಬಲಿ ಪಡೆದ ಕೊವಿಡ್ 19

saranya
09/08/2021

ಸಿನಿಡೆಸ್ಕ್: ಕೇರಳದಲ್ಲಿ ಮನೆ ಮಾತಾಗಿದ್ದ ಖ್ಯಾತ ನಟಿ ಶರಣ್ಯಾ ಇಂದು ಮಧ್ಯಾಹ್ನ 1 ಗಂಟೆಗೆ  ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಮಾರಕ ಕಾಯಿಲೆ ಬ್ರೈನ್ ಟ್ಯೂಮರ್ ನೊಂದಿಗೆ ಹೋರಾಡುತ್ತಿದ್ದ ಸಂದರ್ಭದಲ್ಲಿಯೇ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಕೊರೊನಾ ಅವರ ಜೀವವನ್ನೇ ಕಿತ್ತುಕೊಂಡಿದೆ.

ಕಳೆದ ಹಲವು ವರ್ಷಗಳಿಂದ ಕೇರಳದಲ್ಲಿ ಚರ್ಚೆಗೆ ಕಾರಣವಾಗಿದ್ದ ಶರಣ್ಯಗೆ ಕೇರಳದ ಜನರ ಪ್ರೀತಿ ಲಭಿಸಿತ್ತು. ದೊಡ್ಡ ನಟಿಯಾಗುವ ಆಸೆಯಿಂದ ಚಿತ್ರರಂಗಕ್ಕೆ ಕಾಲಿಟ್ಟ ಶರಣ್ಯಾ ಚಾಕೊ ಅವರಿಗೆ ಆರಂಭದಲ್ಲಿ ತೀವ್ರವಾದ ತಲೆ ನೋವು ಕಾಣಿಸಿಕೊಂಡಿತ್ತು. ಸುಮಾರು 12 ಚಿತ್ರಗಳಲ್ಲಿ ನಟಿಸಿದ್ದ ಶರಣ್ಯಾಗೆ ದಿನದಿಂದ ದಿನಕ್ಕೆ ತಲೆ ನೋವು ಅಧಿಕವಾಗುತ್ತಲೇ ಹೋಗಿತ್ತು. ಹೀಗಾಗಿ ಅವರು ವೈದ್ಯರ ಬಳಿಗೆ ತೆರಳಿ ಪರೀಕ್ಷೆ ನಡೆಸಿದ್ದು, ಈ ವೇಳೆ ಅವರಿಗೆ ಬ್ರೈನ್ ಟ್ಯೂಮರ್ ಇರುವುದು ದೃಢವಾಗಿತ್ತು.

ಬ್ರೈನ್ ಟ್ಯೂಮರ್ ಆದರೂ, ಜೀವನದ ಭರವಸೆಯನ್ನು ಅವರು ಕಳೆದುಕೊಳ್ಳಲಿಲ್ಲ. ಬರೋಬ್ಬರಿ 11 ಬಾರಿ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಅವರಲ್ಲಿ ಜೀವನೋತ್ಸಾಹವೂ ಹೋಗಿರಲಿಲ್ಲ. ಈ ನಡುವೆ ಅವರ ಪತಿಗೂ ಶರಣ್ಯಾ ಬೇಡವಾಗಿ ಹೋಗಿದ್ದರು. ವಿಚ್ಛೇದನವೂ ನಡೆದು ಹೋಗಿತ್ತು. ಈ ಘಟನೆ ಶರಣ್ಯಾ ಅವರನ್ನು ತೀವ್ರವಾಗಿ ಕುಗ್ಗಿಸಿತ್ತು.

ಇಷ್ಟೊಂದು ದೈಹಿಕ, ಮಾನಸಿಕ ನೋವುಗಳನ್ನು ಸಹಿಸಿಕೊಂಡ ಶರಣ್ಯಾಗೆ ಕೇರಳದಲ್ಲಿ ಜನರು ಬೆಂಬಲ ನೀಡಿದರು. ಒಂದು ಹೊಸ ಮನೆಯನ್ನೂ ಕಟ್ಟಿಸಲಾಗಿತ್ತು. ಈ ಮನೆಯಲ್ಲಿ ಕೊನೆಯ ದಿನಗಳಲ್ಲಿ ಸಂತಸದಿಂದ ಅವರು ಬದುಕಿದ್ದರು. ಈ ನಡುವೆ  ಮೇ 23ರಂದು ಶರಣ್ಯಾ ಅವರಿಗೆ ಮಾರಕ ಸಾಂಕ್ರಾಮಿಕ ರೋಗ ಕೊವಿಡ್ 19 ತಗುಲಿಯೇ ಬಿಟ್ಟಿತು. ಇದರ ಮೂಲಕ ಶರಣ್ಯ ಅವರ ಆರೋಗ್ಯ ದಿನದಿಂದ ದಿನಕ್ಕೆ ಕುಸಿಯುತ್ತಲೇ ಹೋಯಿತು. ಜೂನ್ 10ರಂದು ಅವರಿಗೆ ಕೊವಿಡ್ 19 ನೆಗೆಟಿವ್ ಬಂತು. ಆದರೆ, ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ಕೊನೆಗೂ ಇಂದು ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದಾರೆ.

ಇನ್ನಷ್ಟು ಸುದ್ದಿಗಳು…

“ಲವ್ ಯೂ ರಚ್ಚು” ಚಿತ್ರದ ಶೂಟಿಂಗ್ ವೇಳೆ ಅವಘಡ | ಓರ್ವ ಸಾವು, ಇನ್ನೋರ್ವನಿಗೆ ಗಾಯ | ನಟ ಅಜಯ್ ರಾವ್ ಆಕ್ರೋಶ

SSLC Exam result 2021 | ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿ, ಎಲ್ಲರೂ ಪಾಸ್

ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ! | ಮುಂದೆ ನಡೆದದ್ದೇನು ಗೊತ್ತಾ?

ಸಚಿವರಾದರೂ ಜೀಪ್ ನಿಂದ ಇಳಿದು ಸಾಮಾನ್ಯರಂತೆ ನಡೆದ ಸಚಿವ ಅಂಗಾರ! | ಇದು ಸರಳತೆ ಅಲ್ಲ, ವೈಫಲ್ಯ!

ದಾಳಿಂಬೆ ಹಣ್ಣಿನ ರಸ ಸೇವಿಸಿ, ಈ ರೋಗಗಳಿಂದ ಮುಕ್ತಿ ಪಡೆಯಿರಿ!

ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್

ಇತ್ತೀಚಿನ ಸುದ್ದಿ