ಕೊರೊನಾ 3 ಅಲೆಯ ಭೀತಿಯಲ್ಲಿದ್ದ ಭಾರತೀಯರಿಗೆ ಸಿಹಿ ಸುದ್ದಿ!
ನವದೆಹಲಿ: ಕೊರೊನಾ ಮೂರನೇ ಅಲೆಯ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚು ಹಾನಿಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ನಡುವೆ ಭಾರತಕ್ಕೆ ಸಿಹಿ ಸುದ್ದಿಯೊಂದು ಲಭಿಸಿದೆ.
ಭಾರತದಲ್ಲಿ ತಯಾರಾಗುತ್ತಿರುವ ಮೂಗಿನ ಲಸಿಕೆಗಳು(Nasal Vaccines) ಕೊರೊನಾ ಮೂರನೇ ಅಲೆ ವೇಳೆಯಲ್ಲಿ ಮಕ್ಕಳಿಗೆ ಗೇಮ್ ಚೇಂಜರ್ ಆಗಬಹುದು. ಆದರೆ ಈ ವರ್ಷ ಲಸಿಕೆ ಸಿಗುವ ಸಾಧ್ಯತೆಗಳಿಲ್ಲ. ಹಾಗಾಗಿ ಸುರಕ್ಷತೆ ವಹಿಸುವುದು ಮುಖ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ತಿಳಿಸಿದ್ದಾರೆ.
ಕೊರೊನಾ ಮೂರನೇ ಅಲೆಯ ವೇಳೆ ಮಕ್ಕಳಿಗೆ ಹೆಚ್ಚಿನ ಹಾನಿ ಸಂಭವಿಸಲಿದೆ ಎಂದು ಹೇಳಲಾಗಿತ್ತು. ಈ ಸುದ್ದಿಯನ್ನು ಭಾರತೀಯರಿಗೆ ಸ್ವೀಕರಿಸಲು ಕೂಡ ಸಾಧ್ಯವಾಗದಷ್ಟು ನೋವು ತಂದಿತ್ತು. ವಯೋವೃದ್ಧರು ಮೊದಲ ಅಲೆಯಲ್ಲಿ ಸಾವನ್ನಪ್ಪಿದ್ದರು. ಎರಡನೇ ಅಲೆಯಲ್ಲಿ ಕಬ್ಬಿಣದಂತಿದ್ದ ಯುವಕರು ಕ್ಷಣ ಮಾತ್ರದಲ್ಲಿ ಸಾವನ್ನಪ್ಪಿದ್ದರು. ಈ ಸಾವುಗಳನ್ನು ಕಂಡು ಸಾಕಾಗಿ ಹೋಗಿದೆ. ಇದರ ನಡುವೆ ಪುಟ್ಟ ಮಕ್ಕಳ ಸಾವಿನ ಸುದ್ದಿಗಳನ್ನು ಕೇಳುವುದು, ನೋಡುವುದು ಹೇಗೆ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಈ ನಡುವೆ ಮಕ್ಕಳಿಗೆ ಮೂಗಿನ ಲಸಿಕೆ ತಯಾರಾಗುತ್ತಿದೆ. ಆದರೆ ಇದಕ್ಕೆ ಒಂದು ವರ್ಷ ಬೇಕಿದೆ. ಹಾಗಾಗಿ ಪೋಷಕರು ಮಕ್ಕಳನ್ನು ಹೆಚ್ಚಿನ ಮುಂಜಾಗ್ರತೆಯಲ್ಲಿ ಇರಿಸಬೇಕಾದ ಅಗತ್ಯವಿದೆ.