3ನೇ ಅಲೆಯ ಭೀತಿ: 40 ಹಾಸಿಗೆಗಳ ಮಕ್ಕಳ ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ - Mahanayaka
1:25 PM Thursday 16 - October 2025

3ನೇ ಅಲೆಯ ಭೀತಿ: 40 ಹಾಸಿಗೆಗಳ ಮಕ್ಕಳ ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ

child covid center bangalore
12/08/2021

ಬೆಂಗಳೂರು: ಕೊರೊನಾ ಮೂರನೇ ಅಲೆ ಬೆನ್ನಲ್ಲೇ ನಗರದಲ್ಲಿ ಮಕ್ಕಳ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ. ದಕ್ಷಿಣ ವಲಯದ ಪದ್ಮನಾಭನಗರದಲ್ಲಿರುವ ರೀಜನಲ್ ಮ್ಯಾನೇಜ್‍ಮೆಂಟ್ ಕೋಆಪರೇಟಿವ್ ಕೇಂದ್ರದಲ್ಲಿ 40 ಹಾಸಿಗೆಗಳ ಮಕ್ಕಳ ಆರೈಕೆ ಕೇಂದ್ರ ತೆರೆಯಲಾಗಿದೆ.


Provided by

 

ಸೋಂಕಿಗೆ ತುತ್ತಾಗುವ ಮಕ್ಕಳಿಗೆ ಅವಶ್ಯವಿರುವ ಸಾಮಾನ್ಯ ಹಾಸಿಗೆ ಹಾಗೂ ಆಕ್ಸಿಜನ್ ಬೆಡ್‍ಗಳನ್ನು ಸಿದ್ದಪಡಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಬೇಸರ ಕಳೆಯಲು ಆಸ್ಪತ್ರೆ ಗೋಡೆಗಳ ಮೇಲೆ ಡೋರೆಮ್ಯಾನ್, ಸ್ಪೈಡರ್ 3ಡಿ ಕಾರ್ಟೂನ್‍ಗಳ ಚಿತ್ರ ಬಿಡಿಸಲಾಗಿದೆ. ಆಸ್ಪತ್ರೆ ಆವರಣದಲ್ಲಿ ಮಕ್ಕಳು ಆಟವಾಡಲು ಸಹಕಾರಿಯಾಗುವಂತೆ ಪ್ಲೇ ಏರಿಯಾ ನಿರ್ಮಿಸಲಾಗಿದೆ. ಚಿಕ್ಕ ಮಕ್ಕಳು ದಾಖಲಾದರೆ ಅವರೊಂದಿಗೆ ಅವರ ಪೋಷಕರಲ್ಲಿ ಒಬ್ಬರು ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.

 

ಪ್ರಾಯೋಗಿಕವಾಗಿ ದಕ್ಷಿಣ ವಲಯದಲ್ಲಿ ಪ್ರಾಯೋಗಿಕವಾಗಿ ಮಕ್ಕಳ ಆರೈಕೆ ಕೇಂದ್ರ ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಬಿಬಿಎಂಪಿಯ ಎಂಟು ವಲಯಗಳಲ್ಲೂ ಮಕ್ಕಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಬಿಬಿಎಂಪಿ ಸಿದ್ದತೆ ಮಾಡಿಕೊಂಡಿದೆ.

ಇತ್ತೀಚಿನ ಸುದ್ದಿ