ಸಿಡಿ ಪ್ರಕರಣ: ಮೂರನೇ ವಿಡಿಯೋ ಬಿಡುಗಡೆ | ಸುಧಾಕರ್ ಹೇಳಿದ್ದೇನು? - Mahanayaka
6:07 PM Wednesday 11 - December 2024

ಸಿಡಿ ಪ್ರಕರಣ: ಮೂರನೇ ವಿಡಿಯೋ ಬಿಡುಗಡೆ | ಸುಧಾಕರ್ ಹೇಳಿದ್ದೇನು?

sudhakar
26/03/2021

ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂತ್ರಸ್ತ ಯುವತಿ ಮೂರನೇ ವಿಡಿಯೋ ಬಿಡುಗಡೆ ಮಾಡಿದ್ದಾಳೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸುಧಾಕರ್ ಮಾತನಾಡಿದ್ದಾರೆ.

ಈ ಪ್ರಕರಣ ನಡೆದು ಒಂದು ತಿಂಗಳು ಆದ ಮೇಲೆ ವಿಡಿಯೋ ಬಿಡುಗಡೆಯಾಗಿದೆ.  ಇನ್ನು ಒಂದು ತಿಂಗಳು ಆದ ಬಳಿಕ ಆ ತಾಯಿ ಏನು ಬಿಡುಗಡೆ ಮಾಡುತ್ತಾಳೋ ನೋಡೋಣ ಎಂದು ಹೇಳಿದ್ದಾರೆ.

ಈ ಪ್ರಕರಣ ಈಗ ಎಸ್ ಐಟಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಇದರ ಬಗ್ಗೆ ಮಾತನಾಡುವುದು ಸರಿಯಲ್ಲ.  ಈಗ ಮಾತನಾಡುವುದರಿಂದ ತನಿಖೆಯ ಹಿಂಟ್ ಬಿಟ್ಟು ಕೊಟ್ಟಂತಾಗುತ್ತದೆ. ತನಿಖೆ ಮುಗಿಯುವವರೆಗೆ ಈ ಬಗ್ಗೆ ಮಾತನಾಡದೇ ಇರುವುದು ಉತ್ತಮ ಎಂದು ಅವರು ಹೇಳಿದರು.

ಇನ್ನೂ ಇಂದು ಮೂರನೇ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿರುವ ಯುವತಿ, 24 ದಿನಗಳಿಂದ ನಾನು ಜೀವ ಭಯದಲ್ಲಿ ಬದುಕುತ್ತಿದ್ದೇನೆ. ಇಂದು ಎಲ್ಲೋ ಒಂದು ಕಡೆಯಿಂದ ಧೈರ್ಯ ಬಂದಿದೆ. ಇಂದು ನಾನು ನನ್ನ ವಕೀಲರ ಮೂಲಕ ರಮೇಶ್ ಜಾರಕಿಹೊಳಿವಿರುದ್ಧ ದೂರು ದಾಖಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಈ ಬಗ್ಗೆ ಯುವತಿ ಪರ ವಕೀಲ ಜಗದೀಶ್ ಅವರು ಮಾತನಾಡಿ, ಇಂದು ಮಧ್ಯಾಹ್ನ 2:30ಕ್ಕೆ  ಕಮಿಷನರ್ ಅವರಿಗೆ ಯುವತಿಯ ಲಿಖಿತ ದೂರನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ