ಭೂಮಿ ನಡುಕ: ಅಸ್ಸಾಂನ ಉದಲ್ಗುರಿಯಲ್ಲಿ 4.2 ತೀವ್ರತೆಯ ಭೂಕಂಪ
ಇಂದು ಭಾನುವಾರ ಬೆಳಿಗ್ಗೆ 7:47 ಕ್ಕೆ ಅಸ್ಸಾಂನ ಉತ್ತರ-ಮಧ್ಯ ಭಾಗದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿರುವ ಉದಲ್ಗುರಿ ಜಿಲ್ಲೆಯಲ್ಲಿ 15 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ವರದಿ ತಿಳಿಸಿದೆ.
ಭೂಕಂಪದ ಕೇಂದ್ರ ಬಿಂದು ಗುವಾಹಟಿಯಿಂದ ಉತ್ತರಕ್ಕೆ 105 ಕಿ.ಮೀ ಮತ್ತು ತೇಜ್ಪುರದಿಂದ ಪಶ್ಚಿಮಕ್ಕೆ 48 ಕಿ.ಮೀ ದೂರದಲ್ಲಿ ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯ ಬಳಿ ಇದೆ.
ನೆರೆಯ ಜಿಲ್ಲೆಗಳಾದ ದರ್ರಾಂಗ್, ತಮುಲ್ಪುರ್, ಸೋನಿತ್ಪುರ್, ಕಮ್ರೂಪ್ ಮತ್ತು ಬಿಸ್ವಾನಾಥ್ ನ ಜನರು ಸಹ ಈ ಆಘಾತವನ್ನು ಅನುಭವಿಸಿದ್ದಾರೆ. ಅಲ್ಲದೇ ಬ್ರಹ್ಮಪುತ್ರಾ ನದಿಯ ದಕ್ಷಿಣ ದಂಡೆಯಲ್ಲಿರುವ ಕಮ್ರೂಪ್ ಮೆಟ್ರೋಪಾಲಿಟನ್, ಮೋರಿಗಾಂವ್ ಮತ್ತು ನಾಗಾವ್ ನಿವಾಸಿಗಳಿಗೆ ಭೂಕಂಪನದ ಅನುಭವ ಆಗಿದೆ.
ಪಶ್ಚಿಮ ಅರುಣಾಚಲ ಪ್ರದೇಶ ಮತ್ತು ಪೂರ್ವ ಭೂತಾನ್ ನ ಕೆಲವು ಪ್ರದೇಶಗಳಲ್ಲಿ ಭೂಕಂಪನ ಆಗುವ ಸಾಧ್ಯತೆ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth