ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ 9 ಮಂದಿ ದುರಂತ ಸಾವು! - Mahanayaka

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಂದೇ ಮನೆಯ 9 ಮಂದಿ ದುರಂತ ಸಾವು!

gas cylinder
24/07/2021

ಅಹ್ಮದಾಬಾದ್:  ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂದೇ ಮನೆಯ ನಾಲ್ವರು ಮಕ್ಕಳ ಸಹಿತ ಒಟ್ಟು 9 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಅಹ್ಮದಾಬಾದ್ ನಗರದ ಹೊರವಲಯದಲ್ಲಿ ನಡೆದಿದೆ.

ಅಹ್ಮದಾಬಾದ್ ನಗರದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಕುಟುಂಬ ಬಲಿಯಾದವರಾಗಿದ್ದು,  ಘಟನೆಯಲ್ಲಿ ಮಕ್ಕಳು ಮಹಿಳೆಯರು ಸೇರಿದಂತೆ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾತ್ರಿ ಮಲಗುವ ವೇಳೆ ಗ್ಯಾಸ್ ಸೋರಿಕೆಯಾಗಿದ್ದು, ಮನೆಯವರು ಗಾಢ ನಿದ್ದೆಯಲ್ಲಿದ್ದರು. ಈ ವೇಳೆ ನೆರೆ ಹೊರೆಯವರಿಗೆ ಗ್ಯಾಸ್ ನ ವಾಸನೆ ತಟ್ಟಿದ್ದು, ತಕ್ಷಣವೇ ಅವರು ಈ ಬಗ್ಗೆ ಮನೆಯವರನ್ನು ಎಚ್ಚರಿಸಲು ಬಾಗಿಲು ಬಡಿದಿದ್ದಾರೆ. ಗ್ಯಾಸ್ ಸೋರಿಕೆಯ ಅರಿವಿಲ್ಲದ ಕಾರಣ, ಮನೆಯೊಳಗೆ ಮಲಗಿದ್ದ ವ್ಯಕ್ತಿ ಎದ್ದು  ಲೈಟ್ ಸ್ವಿಚ್ ಆನ್ ಮಾಡಿದ್ದು, ಈ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ.

ಘಟನೆಯಲ್ಲಿ  ರಾಂಪ್ಯಾರಿ ಅಹಿರ್ವಾರ್, ರಾಜುಭಾಯ್ ಅಹಿರ್ವಾರ್, ಸೋನು ಅಹಿರ್ವಾರ್, ಸೀಮಾ ಅಹಿರ್ವಾರ್, ಸರ್ಜು ಅಹಿರ್ವಾರ್, ವೈಶಾಲಿ, ನಿತೇಶ್, ಪಾಯಲ್ ಹಾಗೂ ಆಕಾಶ್ ಮೃತಪಟ್ಟಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ

ತಾಯಿಯ ಕಣ್ಣೆದುರೇ ಬಾಲಕಿ ನೀರಿನಲ್ಲಿ ಕೊಚ್ಚಿ ಹೋದಳು!

ರೆಡ್ ಅಲಾರ್ಟ್: ಮುಂದಿನ 24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ

ಅಮ್ಮ ಪ್ರತೀ ದಿನ ಜಗಳವಾಡುತ್ತಾಳೆ ಎಂದು ಕೊಂದ ಪುತ್ರ | ಹೆತ್ತವಳ ಕತ್ತು ಹಿಸುಕಿದ ಪುತ್ರ

“BSP ಗೆದ್ದು ಬಂದ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ” | ಬಿಎಸ್ ಪಿಯಿಂದ ಅಚ್ಚರಿಯ ಹೇಳಿಕೆ

ಇತ್ತೀಚಿನ ಸುದ್ದಿ