ರಾಜಸ್ಥಾನದ ದೌಸಾದಲ್ಲಿ ರೈಲ್ವೆ ಹಳಿಗೆ ಉರುಳಿದ ಬಸ್: 4 ಮಂದಿ ಸಾವು, ಹಲವರು ಮಂದಿಗೆ ಗಾಯ - Mahanayaka

ರಾಜಸ್ಥಾನದ ದೌಸಾದಲ್ಲಿ ರೈಲ್ವೆ ಹಳಿಗೆ ಉರುಳಿದ ಬಸ್: 4 ಮಂದಿ ಸಾವು, ಹಲವರು ಮಂದಿಗೆ ಗಾಯ

06/11/2023

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಬಸ್ ನಿಯಂತ್ರಣ ಕಳೆದುಕೊಂಡು ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ದೌಸಾ ಕಲೆಕ್ಟರೇಟ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ಬಸ್ 30 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.


Provided by

ಅಪಘಾತದ ನಂತರ 28 ಜನರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅದರಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲು ಎಸ್ಡಿಎಂ ಅನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದೌಸಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜ್ಕುಮಾರ್ ಕಸ್ವಾ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ