ಇಂದಿನಿಂದ 4 ದಿನ ಪೋಲಿಯೋ ಲಸಿಕೆ ಕಾರ್ಯಕ್ರಮ | ಕೊವಿಡ್ ಲಸಿಕೆ ಕಾರ್ಯಕ್ರಮ ರದ್ದು! - Mahanayaka
12:43 AM Wednesday 5 - February 2025

ಇಂದಿನಿಂದ 4 ದಿನ ಪೋಲಿಯೋ ಲಸಿಕೆ ಕಾರ್ಯಕ್ರಮ | ಕೊವಿಡ್ ಲಸಿಕೆ ಕಾರ್ಯಕ್ರಮ ರದ್ದು!

31/01/2021

ಬೆಂಗಳೂರು: ಕೊರೊನಾ ಲಸಿಕೆಯ ಕಾರ್ಯಕ್ರಮದ ನಡುವೆಯೇ ಪೋಲಿಯೋ ಕಾರ್ಯಕ್ರಮ ಆರಂಭವಾಗಿದೆ.  ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ವರೆಗೆ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದೆ.

5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಪೋಲಿಯೋದಿಂದ ದೇಶವನ್ನು ಮುಕ್ತಗೊಳಿಸಲು ಪ್ರತಿ ವರ್ಷವೂ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಇಂದಿನಿಂದ ಫೆ.3ರವರೆಗೆ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದೆ.

ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಮಯ ಬೇಕಾಗಿರುವುದಿಂದಾಗಿ ಸದ್ಯ ಕೊವಿಡ್ ಲಸಿಕೆ ಅಭಿಯಾನವನ್ನು ಸ್ಥಗಿತಗೊಳಿಸಲಾಗಿದೆ.  ಕೊರೊನಾ ಲಸಿಕೆ ಕಾರ್ಯಕ್ರಮವನ್ನು ನಾಲ್ಕು ದಿನಗಳ ಕಾಲ ಮುಂದೂಡುವಂತೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೇ ಆದೇಶ ಹೊರಡಿಸಿದ್ದಾರೆ.

ಇತ್ತೀಚಿನ ಸುದ್ದಿ