ತಾಯಿ ಸಾವನ್ನಪ್ಪಿದ್ದು ಗೊತ್ತಿಲ್ಲದೇ 4 ದಿನ ಅಮ್ಮನ ಮಡಿಲಲ್ಲೇ ಮಲಗಿದ್ದ ಮಗ - Mahanayaka

ತಾಯಿ ಸಾವನ್ನಪ್ಪಿದ್ದು ಗೊತ್ತಿಲ್ಲದೇ 4 ದಿನ ಅಮ್ಮನ ಮಡಿಲಲ್ಲೇ ಮಲಗಿದ್ದ ಮಗ

rajalaxmi
15/03/2022

ತಿರುಪತಿ: ತಾಯಿ ಸಾವನ್ನಪ್ಪಿರೋದು ತಿಳಿಯದೇ ಮಗ 10 ವರ್ಷದ ​​  ಶ್ಯಾಮ್ ​​ಕಿಶೋರ್ 4 ದಿನಗಳ ಕಾಲ ಆಕೆಯ ಮೃತದೇಹದ ಪಕ್ಕದಲ್ಲೇ ಮಲಗಿದ ಘಟನೆ ಆಂಧ್ರ ಪ್ರದೇಶ ತಿರುಪತಿ ನಗರದಲ್ಲಿ ನಡೆದಿದೆ.

ತಾಯಿ ಮೃತದೇಹದಿಂದ ಕೆಟ್ಟ ವಾಸನೆ ಹೊರ ಬಂದ ವೇಳೆ ಅನುಮಾನಗೊಂಡ ಬಾಲಕ ತನ್ನ ಮಾಮನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಅಮ್ಮ ನಿದ್ದೆ ಮಾಡುತ್ತಿದ್ದಾಳೆ. ಮನೆಯಲ್ಲ ವಾಸನೆ ಬರುತ್ತಿದೆ. ಆಪರೇಷನ್​ ಮಾಡಿಸೋಣ ಬನ್ನಿ ಎಂದು ತನ್ನ ಸಂಬಂಧಿ ಮಾವನಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಹೀಗಾಗಿ ಘಟನೆ ಬೆಳಕಿಗೆ ಬಂದಿದೆ.

41 ವರ್ಷ ವಯಸ್ಸಿನ  ರಾಜಲಕ್ಷ್ಮಿ ಮೃತರಾದ ಮಹಿಳೆಯಾಗಿದ್ದು, ಈಕೆಯ ಮಗ  ಶ್ಯಾಮ್​ ಮಾನಸಿಕ ಬೆಳವಣಿಗೆ ಇಲ್ಲದ ಬಾಲಕನಾಗಿದ್ದಾನೆ. ತಾಯಿ ಸಾವನ್ನಪ್ಪಿದ್ದಾಳೆ  ಎಂದೂ ತಿಳಿಯದೇ ಎಂದಿನಂತೆ ನಾಲ್ಕು ದಿನಗಳ ಕಾಲ ಶಾಲೆಗೆ ಹೋಗಿ ಬಂದು ಬಳಿಕ ಮನೆಯಲ್ಲಿದ್ದ ಚಾಕೋಲೇಟ್​, ಬಿಸ್ಕಟ್​ ತಿಂದು ತಾಯಿ ಪಕ್ಕದಲ್ಲೇ ಮಲಗುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷ ಪ್ರಿಯಗೆ ರಾಯಭಾರ ಕಚೇರಿಯ ಸಹಾಯದ ಭರವಸೆ

ಬರೀ ಟ್ವೀಟ್ ಮಾಡಿದರೆ ಪಕ್ಷ ಉಳಿಯಲ್ಲ: ಕಾಂಗ್ರೆಸ್ ಮುಖಂಡ ವೀರಪ್ಪ  ಮೊಯ್ಲಿ ಕಿಡಿ

ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರಧ್ವಜಕ್ಕೆ ಸರಣಿ ಅವಮಾನ

ಹಿಜಾಬ್ ವಿಚಾರ: ಹೈಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಬೇಕು; ಸಿಎಂ ಬಸವರಾಜ ಬೊಮ್ಮಾಯಿ

ನಮ್ಮ ಪ್ರಾಂಶುಪಾಲರು ಪ್ರತಿದಿನ ಕುರಾನ್, ಬೈಬಲ್, ಭಗವದ್ಗೀತೆ ಓದಿಸುತ್ತಿದ್ದರು: ಮುಸ್ಕಾನ್

ಇತ್ತೀಚಿನ ಸುದ್ದಿ