ಗಂಡು ಮಕ್ಕಳಾಗಲಿಲ್ಲ ಎಂದು ನಾಲ್ಕು ಹೆಣ್ಣು ಮಕ್ಕಳನ್ನು ಕೊಂದ ತಾಯಿ! - Mahanayaka
11:54 PM Wednesday 13 - November 2024

ಗಂಡು ಮಕ್ಕಳಾಗಲಿಲ್ಲ ಎಂದು ನಾಲ್ಕು ಹೆಣ್ಣು ಮಕ್ಕಳನ್ನು ಕೊಂದ ತಾಯಿ!

10/02/2021

ಚಂಡೀಗಢ: ಗಂಡು ಮಕ್ಕಳು ಆಗಲಿಲ್ಲ ಎಂದು ತಾಯಿಯೊಬ್ಬಳು ತನ್ನ ನಾಲ್ಕು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಮಹಿಳೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಘಟನೆ 2020ರ ನವೆಂಬರ್ ನಲ್ಲಿ ಹರ್ಯಾಣದ ನುಹ್​ ಜಿಲ್ಲೆಯ ವಾಸಿ ಖುರ್ಷಿದ್​ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ಹೋಗಿದ್ದ ವೇಳೆ ಈತನ ಪತ್ನಿ ಫರ್ಮೀನಾ ಈ ಕೃತ್ಯ ಎಸಗಿದ್ದಾಳೆ.

ಆರು, ನಾಲ್ಕು, ಮೂರು ಮತ್ತು ಒಂದು ವರ್ಷದ ಮಕ್ಕಳ ಗಂಟಲನ್ನು ಚಾಕುವಿನಿಂದ ಸೀಳಿ ಫರ್ಮಿನಾ ಹತ್ಯೆ ಮಾಡಿದ್ದು, ಬಳಿಕ  ತನ್ನ ಕತ್ತನ್ನೂ ಚಾಕುವಿನಿಂದ ಕೊಯ್ದುಕೊಂಡಿದ್ದಾಳೆ. ಈ ವೇಳೆ ಪತಿ ಮನೆಗೆ ಆಗಮಿಸಿದ್ದು, ಊರಿನವರ ಸಹಾಯದೊಂದಿಗೆ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ಮೀನಾ ಸೋಮವಾರದಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾಳೆ. ಅಲ್ಲದೇ ಮಕ್ಕಳನ್ನು ತಾನೇ ಹತ್ಯೆ ಮಾಡಿರುವುದಾಗಿ ಫರ್ಮೀನಾ ಪೊಲೀಸರಿಗೆ ತಿಳಿಸಿದ್ದಾಳೆ.




ಇತ್ತೀಚಿನ ಸುದ್ದಿ