ಮಂಗಳೂರು ಸೇರಿದಂತೆ ರಾಜ್ಯದ 4 ಮಹಾನಗರಗಳಲ್ಲಿ ಸಂಚಾರಿ ಲ್ಯಾಬ್, ಕ್ಲಿನಿಕ್ ಸೇವೆ
![bommai](https://www.mahanayaka.in/wp-content/uploads/2022/06/bommai.jpg)
ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಜ್ಯದ 4 ಮಹಾನಗರಗಳಲ್ಲಿ ಸಂಚಾರಿ ಲ್ಯಾಬ್, ಕ್ಲಿನಿಕ್ ಸೇವೆ ಆರಂಭಿಸಲಿದ್ದು, ಇದು ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರೋಟರಿ ಬೆಂಗಳೂರು ಹೈಗ್ರೌಂಡ್ಸ್, ಇನ್ಫೋಸಿಸ್ ಫೌಂಡೇಶನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಧಾನಸೌಧ ಮುಂಭಾಗದಲ್ಲಿ ಏರ್ಪಡಿಸಿದ್ದ ‘ಲ್ಯಾಬ್ ಬಿಲ್ಟ್ ಆನ್ ವೀಲ್ಸ್ – ಮೊಬೈಲ್ ಕ್ಲಿನಿಕ್’ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸದ್ಯ ಮಂಗಳೂರು ,ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿಯಲ್ಲಿ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಿದ್ದು, ಯಶಸ್ವಿಯಾದಲ್ಲಿ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.
ಸಂಚಾರಿ ಲ್ಯಾಬ್, ಕ್ಲಿನಿಕ್ ನಲ್ಲಿ ಔಷಧ, ಕ್ಲಿನಿಕ್, ಔಷಧ ಸಾಗಿಸಲು ರೆಫ್ರಿಜರೇಟರ್, ತುರ್ತುಚಿಕಿತ್ಸೆಗೆ ಆಮ್ಲಜನಕ, ಸಾಂಕ್ರಾಮಿಕ ರೋಗ ಪತ್ತೆ ಸೌಲಭ್ಯ, ಕನಿಷ್ಠ ಸರ್ಜರಿಗೆ ಪ್ರತ್ಯೇಕ ಹಾಸಿಗೆ ಸೇರಿದಂತೆ ವಿವಿಧ ಸೌಲಭ್ಯಗಳು ಇರುತ್ತವೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಸ್ಥಳದಲ್ಲಿಯೇ ತಪಾಸಣೆ ಮತ್ತು ಚಿಕಿತ್ಸೆ ಪರಿಹಾರ ನೀಡುವ ವ್ಯವಸ್ಥೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮೊಬೈಲ್ ಆಸ್ಪತ್ರೆ ಆರಂಭಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಕೊರತೆ ಇರುವ ಕಡೆ ಸಂಚಾರಿ ಕ್ಲಿನಿಕ್ ಗಳ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪತ್ನಿ ರುಚಿಕರ ಅಡುಗೆ ಮಾಡಿಕೊಡುವುದಿಲ್ಲ ಎಂದು ಪತಿ ಆತ್ಮಹತ್ಯೆಗೆ ಶರಣು
Y’S Men club of mangaluru: ಸಾಮಾಜಿಕ ಸೇವೆಗಳ ಕಿರುಪರಿಚಯ
ಮೂವರು ಬಾಲಕರ ಮೇಲೆ ಅತ್ಯಾಚಾರ: ಮದ್ರಸ ಶಿಕ್ಷಕ, ಹಿರಿಯ ವಿದ್ಯಾರ್ಥಿ ಅರೆಸ್ಟ್