ಪತಿಯ ಜೊತೆಗೆ ಜಗಳವಾಡಿ, ತನ್ನ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿದ ಪಾಪಿ ತಾಯಿ - Mahanayaka
7:58 AM Tuesday 16 - September 2025

ಪತಿಯ ಜೊತೆಗೆ ಜಗಳವಾಡಿ, ತನ್ನ ನಾಲ್ವರು ಮಕ್ಕಳನ್ನು ಬಾವಿಗೆ ತಳ್ಳಿದ ಪಾಪಿ ತಾಯಿ

lucknow news
25/07/2021

ಲಕ್ನೋ: ಪತಿಯ ಜೊತೆಗೆ ಜಗಳವಾಡಿದ ಪತ್ನಿಯೋರ್ವಳು ತನ್ನ ನಾಲ್ವರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಬಾವಿಗೆ ತಳ್ಳಿದ ಆತಂಕಾರಿ ಘಟನೆ ನಡೆದಿದ್ದು, ಪರಿಣಾಮವಾಗಿ ಮೂವರು ಬಾಲಕಿಯರು ಸಾವನ್ನಪ್ಪಿದ್ದಾರೆ.


Provided by

8 ವರ್ಷ ವಯಸ್ಸಿನ ಗಿಲಬ್ಸಾ, 3 ವರ್ಷ ವಯಸ್ಸಿನ ನುಸಬಾ ಖತೂನ್ ಮತ್ತು 2 ವರ್ಷ ವಯಸ್ಸಿನ ಸಹೆಬಾ ಖತೂನ್ ಮೃತಪಟ್ಟ ಬಾಲಕಿಯರಾಗಿದ್ದು,  5 ವರ್ಷ ವಯಸ್ಸಿನ ಅಫ್ರಿನಾ ಖತೂನ್ ಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆರೋಪಿ ತಾಯಿ ನಾಲ್ಕು ಜನ ಹೆಣ್ಣು ಮಕ್ಕಳೊಂದಿಗೆ  ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಳು. ಪತಿ ಅಸ್ಲಾಂ ಅಲಂ ಅಬ್ರಾಡ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಘಟನೆ ನಡೆದ ದಿನದಂದು ಪತ್ನಿ ನೂರ್ಜಹಾನ್ ನಿಸಾನ್ ತನ್ನ ಪತಿ ಅಸ್ಲಾಂ ಜೊತೆಗೆ ದೂರವಾಣಿ ಕರೆಯಲ್ಲಿ ಗಲಾಟೆ ನಡೆಸಿದ್ದು, ಗಲಾಟೆಯ ಬಳಿಕ ತೀವ್ರ ಆಕ್ರೋಶಿತಳಾಗಿ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಉತ್ತರ ಪ್ರದೇಶದ ಖುಷಿನಗರಕ್ಕೆ ತೆರಳಿದ್ದಾಳೆ. ಹೊರಡುವುದಕ್ಕೂ ಮೊದಲು ಮನೆಯ ಬಳಿಯ ಕೊಳಕ್ಕೆ ತನ್ನ ಹೆಣ್ಣು ಮಕ್ಕಳನ್ನು ದೂಡಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಬಾವಿಯಲ್ಲಿದ್ದ ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಮೂವರು ಮಕ್ಕಳು ಅದಾಗಲೇ ಮೃತಪಟ್ಟಿದ್ದು, ಓರ್ವಳು ಬಾಲಕಿಯನ್ನು ಮಾತ್ರವೇ ಸ್ಥಳೀಯರಿಂದ ರಕ್ಷಿಸಲು ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ಪ್ರೇಯಸಿಯ ಮನೆಗೆ ಬಂದಿದ್ದ ಯುವಕನನ್ನು ಥಳಿಸಿ, ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ!

ಕೇರಳದಲ್ಲಿ ಆತಂಕ ಸೃಷ್ಟಿಸಿದ ವಿಚಿತ್ರ ಮಳೆ: ಅಲ್ಪ ಸಮಯದಲ್ಲಿ ತೀವ್ರ ಹಾನಿ ಮಾಡುತ್ತಿದೆ ಸುಳಿಗಾಳಿ ಸಹಿತ ಮಳೆ

ಮಾಟಮಂತ್ರ ಮಾಡುತ್ತಿದ್ದಾಳೆಂದು ಆರೋಪಿಸಿ ಬುಡಕಟ್ಟು ಮಹಿಳೆಯ ಶಿರಚ್ಛೇದನ!

ಯುವಕನ ಲಾಕಪ್ ಡೆತ್ ವಿರೋಧಿಸಿ ಪೊಲೀಸ್ ಠಾಣೆಗೆ ನುಗ್ಗಿದ ಗ್ರಾಮಸ್ಥರು | ಮಹಿಳಾ ಪೇದೆ ಸ್ಥಳದಲ್ಲಿಯೇ ಸಾವು

ಇತ್ತೀಚಿನ ಸುದ್ದಿ