ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ: ಅಪರೂಪದ ಘಟನೆ
ಶಿವಮೊಗ್ಗ: ಮಹಿಳೆಯೊಬ್ಬರು ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಶಿವಮೊಗ್ಗ ನಗರದ ಸರ್ಜಿ ಆಸ್ಪತ್ರೆಯಲ್ಲಿ ಅಲ್ಮಾ ಬಾನು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವಳಿ ಹಾಗೂ ತ್ರಿವಳಿ ಮಕ್ಕಳಿಗೆ ಜನ್ಮ ನೀಡುವ ಪ್ರಕರಣಗಳು ಸಾಮಾನ್ಯವಾಗಿದೆ. ಆದರೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಈ ಘಟನೆ ಅಪರೂಪವಾಗಿದೆ.
ಆರೀಫ್ ಮತ್ತು ಅಲ್ಮಾ ಬಾನು ದಂಪತಿ ಭದ್ರಾವತಿ ತಾಲೂಕಿನ ಕಡಸ ಗ್ರಾಮದವರಾಗಿದ್ದು, ತಾಯಿ ಜೊತೆಗೆ ನಾಲ್ಕು ಮಕ್ಕಳು ಸಹ ಆರೋಗ್ಯವಾಗಿವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಿವಾಲ್ವಾರ್ ತೋರಿಸಿ ಬೆದರಿಸಿ ಪಿಜಿ ಮಾಲಿಕನಿಂದ ಯುವತಿಯ ಅತ್ಯಾಚಾರ!
ಟ್ವಿಟ್ಟರ್ ನಲ್ಲಿ ಟ್ರೆಂಟ್ ಆದ ‘ರಿಜೆಕ್ಟ್ ಬ್ರಾಹ್ಮಿನ್ ಟೆಕ್ಟ್ಸ್ ಬುಕ್’: ಚಕ್ರತೀರ್ಥ ಹಳೆಯ ಪೋಸ್ಟ್ ವೈರಲ್
ಎಲೆಕ್ಟ್ರಿಕ್ ಬೈಕ್ ನ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಶಾಕ್ ತಗಲಿ ಯುವತಿ ಸಾವು