ಮಸೀದಿ ವಿವಾದ: ಜೂನ್ 4ರಂದು ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ - Mahanayaka
7:10 PM Friday 20 - September 2024

ಮಸೀದಿ ವಿವಾದ: ಜೂನ್ 4ರಂದು ಹಿಂದೂ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ

srirangapattana
03/06/2022

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಹಿಂದೂಪರ ಸಂಘಟನೆಗಳು ಮುಂದಾಗಿವೆ. ಇನ್ನೊಂದು ಕಡೆ ಜೂನ್ 4 ರಂದು ಶ್ರೀರಂಗಪಟ್ಟಣ ಚಲೋಗೆ ಕರೆ ನೀಡಿವೆ.

ಜಾಮಿಯಾ ಮಸೀದಿ ಈ ಹಿಂದೆ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಾಗಿತ್ತು. ಈ ದೇವಸ್ಥಾನದ ಮೇಲೆ ಟಿಪ್ಪು ಸುಲ್ತಾನ್ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾರೆ. ಇಂದಿಗೂ ಜಾಮಿಯಾ ಮಸೀದಿಯಲ್ಲಿ ದೇವಸ್ಥಾನದ ಹಲವು ಕುರುಹುಗಳು ಇವೆ. ಇಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಗರ್ಭಗುಡಿ ಇದೆ ಎನ್ನುವುದು ಸಂಘಟನೆಗಳ ವಾದ.

ಜೂನ್ 4 ರಂದು ಶ್ರೀರಂಗಪಟ್ಟಣ ಚಲೋ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜಾಮಿಯಾ ಮಸೀದಿ ಸುತ್ತಲೂ ಪೊಲೀಸರ ಕಣ್ಣಾವಲು ಇರಿಸಲಾಗಿದ್ದು, ಅಹಿತಕರ ಘಟನೆ ಜರುಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮಸೀದಿಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದು, ಜೂನ್ 3 ಮತ್ತು 4 ರಂದು ಜಾಮಿಯಾ ಮಸೀದಿ ಸುತ್ತ 144 ಸೆಕ್ಷನ್ ಜಾರಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ: ಹಿಂದುತ್ವ ಹೋರಾಟಗಾರರಿಗೆ ಮೋಹನ್ ಭಾಗವತ್ ತಿರುಗೇಟು

ಜಾತ್ಯಾತೀತಯೇ ನಮ್ಮ ಜೀವವಾಯು, ಜಾತ್ಯತೀತತೆ ಇಲ್ಲವಾದರೆ ಭಾರತವಿಲ್ಲ: ಡಾ.ಕೆ.ಟಿ.ಜಲೀಲ್

ಕಡಬ: ಆರೋಗ್ಯ ತಪಾಸಣೆಗೆ ಬಾರದ ವೈದ್ಯರು | ಕಾದು ಸುಸ್ತಾದ ಕಾರ್ಮಿಕರು

ಪುಷ್ಪ ಸಿನಿಮಾ ಸ್ಟೈಲ್ ನಲ್ಲಿ ರಕ್ತ ಚಂದನ ಸಾಗಾಟ: ಎಮ್ಮೆಯಿಂದಾಗಿ ಸಿಕ್ಕಿಬಿದ್ದ ಕಳ್ಳರು!

ಇತ್ತೀಚಿನ ಸುದ್ದಿ