ದರೋಡೆಯ ಕಟ್ಟು ಕಥೆ ಸೃಷ್ಟಿಸಿ 40 ಲಕ್ಷ ರೂ. ಗುಳುಂ ಯತ್ನ: ಸ್ವಾಮೀಜಿಯ ಕಳ್ಳಾಟ ಬಯಲು - Mahanayaka
10:51 AM Saturday 5 - October 2024

ದರೋಡೆಯ ಕಟ್ಟು ಕಥೆ ಸೃಷ್ಟಿಸಿ 40 ಲಕ್ಷ ರೂ. ಗುಳುಂ ಯತ್ನ: ಸ್ವಾಮೀಜಿಯ ಕಳ್ಳಾಟ ಬಯಲು

Vijaya Mahanteshwar
06/07/2024

ರಾಯಚೂರು: ದರೋಡೆಯ ಕಥೆ ಸೃಷ್ಟಿಸಿ, ಭಕ್ತರಿಗೆ ಸೇರಿದ್ದ 40 ಲಕ್ಷ ರೂಪಾಯಿಯನ್ನು ಗುಳುಂ ಮಾಡಲು ಹೊರಟಿದ್ದ ಸ್ವಾಮೀಜಿ ಪೊಲೀಸರಿ ತನಿಖೆಯಿಂದ ಸಿಕ್ಕಿ ಬಿದ್ದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿರೋ ವಿಜಯಮಹಾಂತೇಶ್ವರ ಶಾಖಾ ಮಠದಲ್ಲಿ ನಡೆದಿದೆ.

ದರೋಡೆಕೋರರು ತಮ್ಮನ್ನು ಬೆದರಿಸಿ 40 ಲಕ್ಷ ರೂಪಾಯಿ ಹಣ ದರೋಡೆ ಮಾಡಿದ್ದಾರೆ ಎಂದು ಇಲ್ಲಿನ ವಿಜಯಮಹಾಂತೇಶ್ವರ ಶಾಖಾ ಮಠದ ಸಿದ್ದಲಿಂಗ ಸ್ವಾಮೀಜಿ ದೂರು ನೀಡಿದ್ದರು.

ಆದರೆ ಸ್ವಾಮೀಜಿಯ ಕೆಲವು ನಡೆಯಿಂದ ಪೊಲೀಸರು ಸ್ವಾಮೀಜಿಯ ಮೇಲೆಯೇ ಅನುಮಾನಗೊಂಡಿದ್ದರು. ಇದೀಗ ಎಫ್ ಐಆರ್ ದಾಖಲಿಸಿದ ಒಂದೇ ದಿನದಲ್ಲಿ ದರೋಡೆಯ ಕಟ್ಟುಕಥೆಯನ್ನು ಪೊಲೀಸರು ಭೇದಿಸಿದ್ದಾರೆ.

ಮಠಕ್ಕೆ ಭಕ್ತರು ಧನ ಸಹಾಯ ಮಾಡಿದ್ದರು. 40 ಲಕ್ಷ ರೂಪಾಯಿಗಳು ಮಠದಲ್ಲಿತ್ತು. ಈ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಸ್ವಾಮೀಜಿ ದರೋಡೆ ಕಥೆ ಕಟ್ಟಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆಯೇ ತನಿಖೆಗೆ ಇಳಿದ ಪೊಲೀಸರು ಮಠದ ಸುತ್ತಲಿನ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದರು. ಈ ವೇಳೆ ಸ್ವಾಮೀಜಿ ಹೇಳಿದಂತೆ ಯಾರು ಕೂಡ ಗನ್ ಹಿಡಿದುಕೊಂಡು ಬಂದಿರುವ ದೃಶ್ಯ ಪತ್ತೆಯಾಗಿರಲಿಲ್ಲ. ಮಠದ ಸಿಸಿ ಕ್ಯಾಮರಾ ಆಫ್ ಆಗಿರುವುದು ತಿಳಿಯುತ್ತಿದ್ದಂತೆಯೇ ಬೆರಳಚ್ಚು ಪರಿಣತರು ಪರಿಶೀಲನೆ ನಡೆಸಿದ್ದು, ಈ ವೇಳೆ ಸ್ವಾಮೀಜಿ ಬೆರಳಚ್ಚು ಪತ್ತೆಯಾಗಿತ್ತು.

ಹೀಗಾಗಿ ಸ್ವಾಮೀಜಿಯೇ ಉದ್ದೇಶಪೂರ್ವಕವಾಗಿ ಸಿಸಿ ಕ್ಯಾಮರಾ ಆಫ್ ಮಾಡಿರುವುದು ಬೆಳಕಿಗೆ ಬಂದಿತ್ತು. ಅಂತಿಮವಾಗಿ ಮಠದಲ್ಲಿ ಯಾವುದೇ ದರೋಡೆ ನಡೆದಿಲ್ಲ, ಇದೆಲ್ಲ ಸ್ವಾಮೀಜಿ ಕಳ್ಳಾಟದ ಕಟ್ಟಕಥೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ