ಭೋಪಾಲ್ ಅನಿಲ ದುರಂತ ಪ್ರಕರಣ: 40 ವರ್ಷಗಳ ಬಳಿಕ ತ್ಯಾಜ್ಯ ವಿಲೇವಾರಿ!
ಭೋಪಾಲ್ ಅನಿಲ ದುರಂತ ನಡೆದು ನಲವತ್ತು ವರ್ಷಗಳ ನಂತರ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ಸ್ಥಳದಲ್ಲಿ ಸಂಗ್ರಹವಾಗಿದ್ದ ಸುಮಾರು 337 ಮೆಟ್ರಿಕ್ ಟನ್ ರಾಸಾಯನಿಕ ತ್ಯಾಜ್ಯವನ್ನು ವಿಲೇವಾರಿಗಾಗಿ ಸ್ಥಳಾಂತರಿಸುವ ಕಾರ್ಯ ಬುಧವಾರ ಪ್ರಾರಂಭವಾಗಿದೆ.
ಡಿಸೆಂಬರ್ 2, 1984 ರ ರಾತ್ರಿ, ಯೂನಿಯನ್ ಕಾರ್ಬೈಡ್ ಸ್ಥಾವರದಿಂದ ಮೀಥೈಲ್ ಐಸೊಸಯನೇಟ್ (ಎಂಐಸಿ) ಅನಿಲದ ಬೃಹತ್ ಬಿಡುಗಡೆಯು ನಗರವನ್ನು ಅನಿಲ ಕೋಣೆಯಾಗಿ ಪರಿವರ್ತನೆಯಾಗಿತ್ತು. ಇದಿ 15,000 ಕ್ಕೂ ಹೆಚ್ಚು ಜನರನ್ನು ಕೊಂದಿತ್ತು ಮತ್ತು 600,000 ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿತ್ತು.
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲ್ವಿಚಾರಣೆಯಲ್ಲಿ ಈ ತ್ಯಾಜ್ಯವನ್ನು ನಿರ್ವಹಿಸಲಾಗುತ್ತಿತ್ತು. ವಿಲೇವಾರಿ ಪಿತಾಂಪುರದ ಸೌಲಭ್ಯದಲ್ಲಿ ನಡೆಯಲಿದೆ.
ತ್ಯಾಜ್ಯವನ್ನು ಸಾಗಿಸಲು 12 ಸೋರಿಕೆ-ನಿರೋಧಕ ಮತ್ತು ಬೆಂಕಿ ನಿರೋಧಕ ಕಂಟೇನರ್ ಗಳನ್ನು ಬಳಸಲಾಗುತ್ತಿತ್ತು, ಪ್ರತಿ ಕಂಟೇನರ್ ಸರಾಸರಿ 30 ಟನ್‌ಗಳನ್ನು ಸಾಗಿಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಸುಮಾರು 100 ಕಾರ್ಮಿಕರು ಭಾಗಿಯಾಗಿದ್ದು, ಸುರಕ್ಷತಾ ಕಾರಣಗಳಿಂದಾಗಿ ಪಾಳಿಗಳನ್ನು 30 ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj