ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಮರಳಿದ 417 ಪರಿಶಿಷ್ಟರು - Mahanayaka
4:03 PM Thursday 12 - December 2024

ಹಿಂದೂ ಧರ್ಮ ತೊರೆದು ಬೌದ್ಧ ಧರ್ಮಕ್ಕೆ ಮರಳಿದ 417 ಪರಿಶಿಷ್ಟರು

yadagiri
15/10/2022

ಯಾದಗಿರಿ: ಜಿಲ್ಲೆಯ ಸುರಪುರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಶುಕ್ರವಾರ ಬುದ್ಧ ವಿವಾರ ಟ್ರಸ್ಟ್ ಮತ್ತು ದಲಿತ ಸಂಘಟನೆಗಳ ಸಹಯೋಗದಲ್ಲಿ 417 ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.

ಬೀದರ್ ನ ಅಣದೂರು ಬುದ್ಧ ವಿಹಾರ ಭಂತೆ ವರಜ್ಯೋತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗಳು ರಮಾತಾಯಿ ಸಮ್ಮುಖದಲ್ಲಿ  ಹಿಂದೂ ಧರ್ಮ ತ್ಯಜಿಸಿದ 417 ಮಂದಿ ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಏಕಾಏಕಿ ಬೌದ್ಧ ಧಮ್ಮ ಸ್ವೀಕರಿಸಿಲ್ಲ, ಅವರು 15 ವರ್ಷಗಳ ಕಾಲ ಧಮ್ಮವನ್ನು ಅಧ್ಯಯನ ಮಾಡಿ ಆ ಬಳಿಕ ಬೌದ್ಧ ಧಮ್ಮ ಸ್ವೀಕರಿಸಿದ್ದರು ಎಂದು ಇದೇ ವೇಳೆ ರಮಾತಾಯಿ ನುಡಿದರು.

ಹಿಂದೂ ಧರ್ಮದಲ್ಲಿ ಪರಿಶಿಷ್ಟರನ್ನು ಕೀಳಾಗಿ ಕಾಣಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಇಚ್ಛೆಯಿಂದ ಬೌದ್ಧ ಧರ್ಮ ಸ್ವೀಕರಿಸಿದ್ದೇವೆ. ಇದು ಮತಾಂತರವಲ್ಲ ಧಮ್ಮದ ದೀಕ್ಷೆ ಪಡೆದಿದ್ದೇವೆ ಎಂದು ಬುದ್ಧ ವಿಹಾರ ಟ್ರಸ್ಟ್ ನ ಅಧ್ಯಕ್ಷ ವೆಂಕಟೇಶ ಹೊಸಮನಿ ಹೇಳಿದರು.

ambedkar

ರಾಜ್ಯದಲ್ಲಿ ಇನ್ನೂ ಅಸ್ಪೃಷ್ಯತೆ ಜೀವಂತವಾಗಿದೆ. ಮುಖ್ಯಮಂತ್ರಿ ಸೇರಿದಂತೆ ಹಲವರು ಪರಿಶಿಷ್ಟರ ಮನೆಯಲ್ಲಿ ಊಟ ಮಾಡುವ ಗಿಮಿಕ್ ಮಾಡ್ತಿದ್ದಾರೆ. ಇದರಿಂದ ಅಸ್ಪೃಷ್ಯತೆ ನಿವಾರಣೆ ಸಾಧ್ಯವಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್  ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ