ಕ್ಲಬ್’ನ ಮೇಲೆ ದಾಳಿ: 43 ಜನ ಆರೋಪಿಗಳು ಪೊಲೀಸ್ ವಶಕ್ಕೆ
22/09/2023
ಬೆಂಗಳೂರು: ಕಾನೂನು ಬಾಹಿರವಾಗಿ ಕ್ಲಬ್ ನ ನಿಯಮಗಳನ್ನು ಉಲ್ಲಂಘಿಸಿ, ಜೂಜಾಟದಲ್ಲಿ ತೊಡಗಿದ್ದ ಕ್ಲಬ್ ಮೇಲೆ ದಾಳಿ, ಒಟ್ಟು 84,570/- ರೂ ಹಾಗೂ ಕೃತ್ಯಕ್ಕೆ ಬಳಸಿದ್ದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾಗಡಿರಸ್ತೆ ಪೊಲೀಸ್ ಠಾಣಾ ಸರಹದ್ದಿಗೊಳಪಟ್ಟ ಅಗ್ರಹಾರ ದಾಸರಹಳ್ಳಿಯ ಎಂ.ಎಂ ಕಾಂಪ್ಲೆಕ್ಸ್ ನಲ್ಲಿರುವ ಸಿಂಕಿನ್ ಸ್ಪೋರ್ಟ್ಸ್ ಅಂಡ್ ಕಲ್ಬರಲ್ ಇನ್ಸಿಟಿಟ್ಯೂಟ್ ನಲ್ಲಿ ಕೆಲವರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಟಿಟ್ ಜೂಜು ಅಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ 6ನೇ ಎಂ.ಎಂ.ಟಿ.ಸಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮಾಗಡಿ ಪೊಲೀಸರು ಪಂಚರುಗಳ ಸಮಕ್ಷಮ ದಾಳಿ ನಡೆಸಿ ಕೋಟಾ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಒಟ್ಟು 43 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ಅವರಿಂದ ಕೃಶ್ಯಕ್ಕೆ ಬಳಸುತ್ತಿದ್ದ ಹೈ ಸ್ಟಕ್ಸ್ ಟೋಕನ್ ಗಳು, 312 ಇಸ್ಪೀಟ್ ಎಲೆಗಳು, ಫೋನ್ ಪೇ , ಸಿಗರೇಟ್ ಪ್ಯಾಕ್ ಗಳು ಮತ್ತು ವಾಕ್ ಪಾಟ್ ಕ್ಲೀಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.