ಜಿಯೋಭಾರತ್ ಮೊಬೈಲ್ ಮೂಲಕ 1 ಕೋಟಿ ಜನರಿಗೆ 4ಜಿ ನೆಟ್’ವರ್ಕ್ ಸಂಪರ್ಕ
ನವದೆಹಲಿ: ದೇಶದ 2ಜಿ ಮತ್ತು 3ಜಿ ಗ್ರಾಹಕರಿಗೆ ಜಿಯೋಭಾರತ್ 4ಜಿ ಮೊಬೈಲ್ ವರದಾನವಾಗಿ ಬಂದಿದೆ. 2ಜಿ ಮತ್ತು 3ಜಿ ಬಳಸುವಂಥ 1 ಕೋಟಿಗೂ ಹೆಚ್ಚು ಗ್ರಾಹಕರು ಜಿಯೋಭಾರತ್ ಮೂಲಕ 4ಜಿ ನೆಟ್ ವರ್ಕ್‌ಗೆ ಸಂಪರ್ಕ ಹೊಂದಿದ್ದಾರೆ. 1,000 ರೂಪಾಯಿಗಿಂತ ಕಡಿಮೆ ಬೆಲೆಯ ಮೊಬೈಲ್ ವಿಭಾಗದ ಶೇಕಡಾ 50ರಷ್ಟು ಪಾಲನ್ನು ಜಿಯೋ ಭಾರತ್ ತನ್ನದಾಗಿಸಿಕೊಂಡಿದೆ. ಇತ್ತೀಚೆಗೆ ಬಿಡುಗಡೆಯಾದ ರಿಲಯನ್ಸ್ ವಾರ್ಷಿಕ ವರದಿಯಲ್ಲಿ ಈ ಅಂಶ ತಿಳಿದುಬಂದಿದೆ.
ಜಿಯೋಭಾರತ್ ಮೊಬೈಲ್ ನಿಂದಾಗಿ 2ಜಿ ಮತ್ತು 3ಜಿಯಿಂದ 4ಜಿಗೆ ಬದಲಾಯಿಸುವ ಗ್ರಾಹಕರ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ ಮತ್ತು ದೇಶದಲ್ಲಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತಿದೆ. ಸುಮಾರು 25 ಕೋಟಿ ಗ್ರಾಹಕರು ಇನ್ನೂ ಫೀಚರ್ ಫೋನ್ ಗಳನ್ನು ಬಳಸುತ್ತಿದ್ದಾರೆ.
ಷೇರುದಾರರಿಗೆ ಪತ್ರ ಬರೆದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ , “ಜಿಯೋಭಾರತ್ ಫೋನ್ ಬಿಡುಗಡೆಯು ದೇಶದಲ್ಲಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಜಿಯೋಭಾರತ್ ಫೋನ್ ಫೀಚರ್ ಫೋನ್ ನ ಬೆಲೆಯಲ್ಲಿ ದೊರೆಯುವಂಥ ಸ್ಮಾರ್ಟ್‌ಫೋನ್ ಆಗಿದೆ, 2ಜಿ ಮುಕ್ತ ಭಾರತದ ಕನಸನ್ನು ನನಸಾಗಿಸುವಲ್ಲಿ ಇದು ಒಂದು ದೊಡ್ಡ ಹೆಜ್ಜೆ ಎಂದು ಸಾಬೀತುಪಡಿಸುತ್ತದೆ,” ಎಂದು ಹೇಳಿದ್ದಾರೆ.
ಜಿಯೋಭಾರತ್ ಒಂದು ವರ್ಷದ ಹಿಂದೆ ಪ್ರಾರಂಭವಾಯಿತು. ಇದು ಯುಪಿಐ, ಜಿಯೋಸಿನಿಮಾ ಮತ್ತು ಜಿಯೋಟಿವಿಯಂತಹ ಅಪ್ಲಿಕೇಷನ್‌ಗಳು ಮತ್ತು ಡಿಜಿಟಲ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸ್ಮಾರ್ಟ್ ಫೋನ್ ಸಾಮರ್ಥ್ಯಗಳೊಂದಿಗೆ ಬಳಕೆದಾರರಿಗೆ ಅನುಕೂಲ ಆಗುವಂಥ ಅತ್ಯಂತ ಕೈಗೆಟುಕುವ ಸಾಧನವಾಗಿದೆ. ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಡೇಟಾವನ್ನು ಸಹ ಒದಗಿಸುತ್ತದೆ. ಇಡೀ ಉದ್ಯಮವು ಟಾರಿಫ್ ಯೋಜನೆಗಳನ್ನು ದುಬಾರಿ ಮಾಡಿದಾಗಲೂ ಜಿಯೋ ಭಾರತ್ನ ಟಾರಿಫ್ ನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಜಿಯೋಭಾರತ್ ಅನ್ನು ಇಂದಿಗೂ 123 ರೂಪಾಯಿಗೆ ರೀಚಾರ್ಜ್ ಮಾಡಬಹುದು. ಈ ದರವು ದೂರಸಂಪರ್ಕ ಉದ್ಯಮದಲ್ಲಿಯೇ ಅತ್ಯಂತ ಕಡಿಮೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth