ಅಸ್ಸಾಂ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗ: ನ್ಯಾಯಾಲಯದಲ್ಲಿ ತೀವ್ರ ಹಿನ್ನಡೆ - Mahanayaka

ಅಸ್ಸಾಂ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಖಭಂಗ: ನ್ಯಾಯಾಲಯದಲ್ಲಿ ತೀವ್ರ ಹಿನ್ನಡೆ

23/05/2024

ಅಸ್ಸಾಂ ಸರ್ಕಾರದ ಬುಲ್ಡೋಜರ್ ನೀತಿಗೆ ನ್ಯಾಯಾಲಯದಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ. ಹೀಗೆ ಬುಲ್ಡೋಜರ್ ಹರಿಸಿ 5 ಮಂದಿಯ ಮನೆಯನ್ನು ನೆಲಸಮಗೊಳಿಸಿದ್ದ ಅಸ್ಸಾಂ ಸರಕಾರ ಇದೀಗ ಸಂತ್ರಸ್ತರಿಗೆ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ನ್ಯಾಯಾಲಯದ ಕಟು ಆದೇಶದ ಬಳಿಕ ಸರ್ಕಾರ ಈ ಪರಿಹಾರವನ್ನು ನೀಡಿ ಮುಖಭಂಗಕ್ಕೆ ಒಳಗಾಗಿದೆ.
ಈ 5 ಕುಟುಂಬಕ್ಕೆ ಪರಿಹಾರವನ್ನು ನೀಡಿರುವ ದಾಖಲೆಗಳನ್ನು ಗುವಾಹಾಟಿ ಹೈಕೋರ್ಟಿಗೆ ಸರಕಾರಿ ವಕೀಲರು ಸಲ್ಲಿಸಿದ್ದಾರೆ.ಸೂಪರ್ಡೆಂಟ್ ಆಫ್ ಪೊಲೀಸ್ ನೇತೃತ್ವದಲ್ಲಿ 5 ಕುಟುಂಬಕ್ಕೆ ಪರಿಹಾರವನ್ನು ನೀಡಲಾಗಿದೆ ಎಂದು ಸರಕಾರ ಹೇಳಿದೆ.

2022 ಮೇ 21ರಂದು ನಾಗುನ್ ಜಿಲ್ಲೆಯ ಸಲೋನಾ ಬಾರಿ ಗ್ರಾಮದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಕೊಟ್ಟ ಪ್ರಕರಣ ನಡೆದಿತ್ತು. ಮೀನು ವ್ಯಾಪಾರಿಯಾದ ಇಸ್ಲಾಂ ಎಂಬ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಕಾರಣ ಆಕ್ರೋಶಗೊಂಡ ನಾಗರಿಕರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟಿದ್ದರು. ಆದರೆ ಅದರ ಬೆನ್ನಿಗೆ, ಬೆಂಕಿ ಇಟ್ಟವರೆಂದು ಆರೋಪಿಸಿ ಐದು ಮಂದಿಯ ಮನೆಯನ್ನು ಪೊಲೀಸರು ಬುಲ್ಡೋಜರ್ ಹರಿಸಿ ದ್ವ0ಸ ಮಾಡಿದ್ದರು. ಈ ಮನೆಗಳನ್ನು ಅಕ್ರಮವಾಗಿ ಕಟ್ಟಲಾಗಿದೆ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದರು.

ಪ್ರಕರಣವನ್ನು ಆಲಿಸಿದ್ದ ಗುಹಾಟಿ ಹೈಕೋರ್ಟು ಕಳೆದ ವರ್ಷವೇ ಧ್ವಂಸಗೊಂಡ ಮನೆಯ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು. ಮನೆ ದ್ವಂಸಗೊಳಿಸಿದ್ದು ಕಾನೂನು ಬಾಹಿರ ಎಂದು ಖಡಾಖಂಡಿತವಾಗಿ ಹೇಳಿತ್ತು. ತನಿಖೆಯ ಹೆಸರಲ್ಲಿ ಅನುಮತಿ ಪಡೆಯದೆ ಯಾರ ಮನೆಯನ್ನು ಧ್ವಂಸಗೊಳಿಸಕೂಡದು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿತ್ತು.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ