ಅಫ್ಘಾನ್ ಬಿಕ್ಕಟ್ಟು: ವಿಮಾನ ನಿಲ್ದಾಣದಲ್ಲಿ ಯು.ಎಸ್. ಅಧಿಕಾರಿಗಳ ಗುಂಡೇಟಿಗೆ ಐವರು ಬಲಿ
ಕಾಬುಲ್: ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬೆನ್ನಲ್ಲೇ ಪ್ರಾಣ ಭಯದಿಂದ ಜನರು ಅಫ್ಘಾನ್ ತೊರೆಯಲು ಏರ್ ಪೋರ್ಟ್ ನ್ ನೆರೆದಿದ್ದಾರೆ. ಇದೇ ಸಂದರ್ಭದಲ್ಲಿ ಕಾಬುಲ್ ವಿಮಾನ ನಿಲ್ದಾಣದಲ್ಲಿ ನಡೆದ ಗುಂಡಿನ ದಾಳಿಗೆ ಐವರು ನಾಗರಿಕರು ಸಾವನ್ನಪ್ಪಿದ್ದಾರೆ.
ಯು ಎಸ್ ಸೇನೆಯ ಗುಂಡಿನ ದಾಳಿಗೆ ಕಾಬುಲ್ ಏರ್ ಪೋರ್ಟ್ ನಲ್ಲಿ ಐವರು ಬಲಿಯಾಗಿದ್ದಾರೆನ್ನಲಾಗಿದ್ದು, ಯುಎಸ್ ನ ರಾಜತಾಂತ್ರಿಕ ರಾಯಭಾರದ ಸಿಬ್ಬಂದಿಯನ್ನು ಕೊಂಡೊಯ್ಯಲು ಬಂದಿದ್ದ ವಿಮಾನಕ್ಕೆ ಏರಲು ಪ್ರಯತ್ನಿಸಿದ ವೇಳೆ ಅವರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಯು ಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಸುಮಾರು 20 ಗಂಟೆಗಳಿಗಿಂತಲೂ ಹೆಚ್ಚು ಕಾಲ ವಿಮಾನಕ್ಕಾಗಿ ಕಾಯುತ್ತಿದ್ದ ಜನರು ಮೃತ ದೇಹಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕೆಲವರು ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ಐವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇವರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೋ ಅಥವಾ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೋ ಎನ್ನುವುದು ತಿಳಿದಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಉಗ್ರರ ಅಟ್ಟಹಾಸಕ್ಕೆ ನಲುಗಿದ ಅಫ್ಘಾನಿಸ್ತಾನ | ಪ್ರಾಣ ಉಳಿಸಿಕೊಳ್ಳಲು ವಿಮಾನದ ಟಯರ್ ಏರಿದವರ ದುರಂತ ಅಂತ್ಯ
ಗದ್ದೆಗಿಳಿದು ನಾಟಿ ಮಾಡಿದ ಶೋಭಾ ಕರಂದ್ಲಾಜೆ | ಸಾಕು ಬಾರಕ್ಕೋ… ಎಂದ ಕಾರ್ಯಕರ್ತರು!
ಗಲಭೆ ಸೃಷ್ಟಿಸಲು ಮುಂದಾದರೆ, ಸಂವಿಧಾನ ಬದ್ಧವಾಗಿ ತಡೆಯಲು ಸಿದ್ಧ | ಸಂಘಪರಿವಾರಕ್ಕೆ ಪಿಎಫ್ ಐ ತಿರುಗೇಟು
ವೀರ ಸಾರ್ವರ್ಕರ್ ರಥಯಾತ್ರೆ ನಡೆಸುತ್ತೇವೆ ತಾಕತ್ ಇದ್ದರೆ ತಡೆಯಿರಿ | ಎಸ್ ಡಿಪಿಐಗೆ ಹಿಂದುತ್ವ ಸಂಘಟನೆಗಳ ಸವಾಲು
ಧ್ವಜಾರೋಹಣದ ವೇಳೆ ರಾಷ್ಟ್ರಗೀತೆ ಮರೆತ ಸಂಸದ, ಕೊನೆಗೆ ಮಾಡಿದ್ದೇನು? | ವಿಡಿಯೋ ವೈರಲ್