ಆಸ್ಪತ್ರೆಯೊಳಗೆ ಹೋಗಿ 5 ನಿಮಿಷದಲ್ಲಿ ಶವವಾಗಿ ಹೊರ ಬಂದ ಸೋಂಕಿತ ವ್ಯಕ್ತಿ! - Mahanayaka
4:16 PM Wednesday 5 - February 2025

ಆಸ್ಪತ್ರೆಯೊಳಗೆ ಹೋಗಿ 5 ನಿಮಿಷದಲ್ಲಿ ಶವವಾಗಿ ಹೊರ ಬಂದ ಸೋಂಕಿತ ವ್ಯಕ್ತಿ!

corona
20/04/2021

ಬೆಂಗಳೂರು:  ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ಯುವಕನೋರ್ವ ಕೇವಲ 5 ನಿಮಿಷದಲ್ಲಿಯೇ ಶವವಾಗಿ ಹೊರ ಬಂದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಸೋಂಕಿತರ ಸಾವಿನ ಮೆರವಣಿಗೆ ಕಂಡು ಇಡೀ ರಾಜ್ಯವೇ ಆತಂಕದಲ್ಲಿದೆ.

ಬೆಂಗಳೂರಿನ ಕೆ.ಸಿ.ನಗರದ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ರೋಗಿಯಾಗಿ ಆಸ್ಪತ್ರೆಯೊಳಗೆ ಹೋಗಿದ್ದ ಯುವಕ 5 ನಿಮಿಷಗಳಲ್ಲಿಯೇ ಮೃತದೇಹವಾಗಿ ವಾಪಸ್ ಬಂದಿದ್ದು, ಪತಿಯ ಸಾವನ್ನು ಸ್ವೀಕರಿಸಲು ಸಾಧ್ಯವಾಗದೇ ಪತ್ನಿ ಸ್ಥಳದಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲಿದ್ದ 48 ವರ್ಷದ ಯುವಕ ಸಾವಿಗೀಡಾಗಿರುವ ವ್ಯಕ್ತಿಯಾಗಿದ್ದು, ಸದ್ಯ ಪೀಣ್ಯ ಬಳಿಯ ಚಿತಾಗಾರಕ್ಕೆ ಮೃತದೇಹವನ್ನು ಸಾಗಿಸಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ