ಐದು ರಾಜ್ಯಗಳ ಚುನಾವಣಾ ಉಸ್ತುವಾರಿಗಳ ಹೆಸರು ಪ್ರಕಟಿಸಿದ ಬಿಜೆಪಿ: ಶೋಭಾ ಕರಂದ್ಲಾಜೆಗೂ ಸ್ಥಾನ - Mahanayaka

ಐದು ರಾಜ್ಯಗಳ ಚುನಾವಣಾ ಉಸ್ತುವಾರಿಗಳ ಹೆಸರು ಪ್ರಕಟಿಸಿದ ಬಿಜೆಪಿ: ಶೋಭಾ ಕರಂದ್ಲಾಜೆಗೂ ಸ್ಥಾನ

shobha karandlaje
08/09/2021

ನವದೆಹಲಿ:  ಮುಂದಿನ ವರ್ಷ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು,  ಮುಂದಿನ ಚುನಾವಣೆಗೆ ಬಿಜೆಪಿ ಈಗಲೇ ಸಿದ್ಧಗೊಂಡಿದ್ದು, ಬುಧವಾರ ಐದು ರಾಜ್ಯಗಳ ಉಸ್ತುವಾರಿಗಳ ಹೆಸರನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಸಚಿವ ಶೋಭಾ ಕರಂದ್ಲಾಜೆ ಅವರ ಹೆಸರು ಕೂಡ ಸೇರಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಉತ್ತರ ಪ್ರದೇಶದ ಉಸ್ತುವಾರಿ ನೀಡಲಾಗಿದೆ. ಇವರ ಜೊತೆಗೆ ಅನುರಾಗ್ ಠಾಕೂರ್, ಅರ್ಜುನ್ ರಾಮ್ ಮೇಘ್ವಾಲ್, ಸರೋಜ್ ಪಾಂಡೆ, ಶೋಭಾ ಕರಂದ್ಲಾಜೆ, ಕ್ಯಾಪ್ಟನ್ ಅಭಿಮನ್ಯು, ಅನ್ನಪೂರ್ಣ ದೇವಿ ಮತ್ತು ವಿವೇಕ್  ಠಾಕೂರ್ ಅವರಿಗೂ ಜವಾಬ್ದಾರಿ ನೀಡಲಾಗಿದೆ.

ಕ್ಯಾಬಿನೆಟ್ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ  ಪಂಜಾಬ್ ನ ಜವಾಬ್ದಾರಿ ನೀಡಲಾಗಿದ್ದು, ಇವರ ಜೊತೆಗೆ  ಹರ್ದೀಪ್ ಪುರಿ, ಮೀನಾಕ್ಷಿ ಲೇಖಿ, ವಿನೋದ್ ಚಾವ್ಡಾ ಇರಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಉತ್ತರಾಖಂಡದ ಮುಖ್ಯ ಉಸ್ತುವಾರಿ ವಹಿಸಲಾಗಿದೆ.

ಇನ್ನೂ ಲಾಕೆಟ್ ಚಟರ್ಜಿ ಮತ್ತು ಸರ್ದಾರ್ ಆರ್ ಪಿ ಸಿಂಗ್ ಅವರು ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಗೋವಾದ ಉಸ್ತುವಾರಿ ನೀಡಲಾಗಿದೆ. ಮಣಿಪುರದ ಉಸ್ತುವಾರಿಯನ್ನು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರಿಗೆ ವಹಿಸಲಾಗಿದೆ.

ಇನ್ನಷ್ಟು ಸುದ್ದಿಗಳು…

ಅನುಶ್ರೀ ಮುಖವಾಡ ಕಳಚಿದೆ, ಜೈಲಿಗೆ ಹೋಗೋದು ಪಕ್ಕಾ | ಪ್ರಶಾಂತ್ ಸಂಬರ್ಗಿ

ರವಿಶಂಕರ್ ಗುರೂಜಿ ಆಶ್ರಮದವರಿಗೇ ಮಂಕುಬೂದಿ ಎರಚಿ ವಂಚಿಸಿದ ನಕಲಿ ಐಎಎಸ್ ಅಧಿಕಾರಿ!

ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಲಾರಿ | ಕಾರಿನಲ್ಲಿದ್ದ ಇಬ್ಬರ ದುರಂತ ಸಾವು

12 ವರ್ಷದ ಬಾಲಕಿಯ ಮೇಲೆ ಮಲತಂದೆ, ನೆರೆ ಮನೆಯ ವ್ಯಕ್ತಿಯಿಂದ ಅತ್ಯಾಚಾರ!

ನಿಶ್ಚಿತಾರ್ಥವಾದ ಬೆನ್ನಲ್ಲೇ ಗಂಡಿಗೆ ಶಾಕ್ ನೀಡಿದ ಯುವತಿ | ಚಿನ್ನಾಭರಣದೊಂದಿಗೆ ಪರಾರಿ, ತಾಯಿಗೂ ಟೋಪಿ ಹಾಕಿದ ಮಗಳು!

ಪ್ರೀತಿಸಿ ವಿವಾಹವಾಗಿದ್ದವರನ್ನು ಜಾತಿಗಾಗಿ ಬೇರ್ಪಡಿಸಿದರು! | ಫೇಸ್ ಬುಕ್ ಲೈವ್ ಗೆ ಬಂದು ಯುವಕ ಆತ್ಮಹತ್ಯೆ

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ ಐ ಅರ್ಜುನ್ ಗೆ ಜೈಲೇ ಗತಿ

ಡ್ರಗ್ಸ್ ಕಂಟಕ: ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು? | ರೂಮ್ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದಳು ಎಂದ ಕಿಶೋರ್ ಶೆಟ್ಟಿ?

ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ

ಗಣೇಶನ ಹಬ್ಬದಂದು ಗಬ್ಬೆದ್ದು ನಾರಲಿದೆ ಬೆಂಗಳೂರು! | ಸ್ವಚ್ಛತಾ ಸೈನಿಕರು ಕೊಟ್ರು ನೋಡಿ ಶಾಕ್!

ಇತ್ತೀಚಿನ ಸುದ್ದಿ