ಬಿಗ್ ಬ್ರೇಕಿಂಗ್ ನ್ಯೂಸ್:  ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ - Mahanayaka
12:03 AM Thursday 12 - December 2024

ಬಿಗ್ ಬ್ರೇಕಿಂಗ್ ನ್ಯೂಸ್:  ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

26/02/2021

ನವದೆಹಲಿ: ಕರ್ನಾಟಕ ಉಪ ಚುನಾವಣೆ ಸೇರಿದಂತೆ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣಾ ಆಯೋಗ ದಿನಾಂಕ ಘೋಷಣೆಯಾಗಿದ್ದು,  ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ  ಇಂದು ಕರೆದ ಸುದ್ದಿಗೋಷ್ಠಿಯಲ್ಲಿಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಹೊಸ ನಿಯಮಗಳನ್ನು ಹಾಕಲಾಗಿದ್ದು, ಮನೆಮನೆ ಪ್ರಚಾರಕ್ಕೆ ಅಭ್ಯರ್ಥಿ ಕೇವಲ 5 ಜನರು ಮಾತ್ರವೇ ತೆರಳಬೇಕು, ಬಹಿರಂಗ ಸಭೆಗಳಿಗೆ ಅವಕಾಶವಿದೆ.. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಬಹಿರಂಗ ಸಭೆಗಳಿಗೆ ಮೈದಾನಗಳನ್ನು ಮೊದಲೇ ಗುರುತಿಸಿ ಅಧಿಕಾರಿಗಳೇ ಪ್ರಕಟಿಸುತ್ತಾರೆ ಎಂಬ ನಿಯಮಗಳನ್ನು ಅರೋರಾ ತಿಳಿಸಿದರು.

ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳಲ್ಲಿ ಒಟ್ಟು 18.68 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ. 2.7 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಒಟ್ಟು 824  ಕ್ಷೇತ್ರಗಳಿಗೆ  ಮತದಾನ ನಡೆಯಲಿದೆ.

ಇನ್ನೂ ಚುನಾವಣಾ ಅಕ್ರಮಗಳ ಬಗ್ಗೆ ಜನರು ನೇರವಾಗಿ 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಥವಾ ಎಸ್ ಎಂ ಎಸ್ ಕೂಡ ಕಳುಹಿಸ ಬಹುದು ಎಂದು ಚುನಾವಣಾ ಆಯುಕ್ತರು ತಿಳಿಸಿದರು. ಇನ್ನೂ ಪುದುಚೇರಿಯಲ್ಲಿ ಒಂದು ಕ್ಷೇತ್ರಕ್ಕೆ 22  ಲಕ್ಷ ಚುನಾವಣಾ ವೆಚ್ಚ ನಿಗದಿಪಡಿಸಲಾಗಿದೆ. ಇತರ ನಾಲ್ಕು ನಾಲ್ಕು ರಾಜ್ಯಗಳಲ್ಲಿ 30.8 ಲಕ್ಷ ವೆಚ್ಚ ನಿಗದಿ ಪಡಿಸಲಾಗಿದೆ.

 

ಚುನಾವಣೆ ದಿನಾಂಕ ಹಾಗೂ ವಿವರಗಳು:

ಅಸ್ಸಾಮ್ ನಲ್ಲಿ ಒಟ್ಟು 3 ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಮಾರ್ಚ್ 2ರಂದು ನಡೆಯಲಿದೆ. 77 ವಿಧಾನ ಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.   ಮಾರ್ಚ್ 27ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು,  39ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.  ಏಪ್ರಿಲ್ 1ರಂದು  ಮೂರನೇ ಹಂತದ ಚುನಾವಣೆ ನಡೆಯಲಿದೆ.

ಕೇರಳ ವಿಧಾನಸಭಾ ಚುನಾವಣೆ: ಮಾರ್ಚ್ 12ರಂದು  14 ಜಿಲ್ಲೆಗಳಲ್ಲಿ 148 ಕ್ಷೇತ್ರಗಳಲ್ಲಿ ಒಂದೇ ಬಾರಿಗೆ  ಚುನಾವಣೆ  ನಡೆಯಲಿದೆ.  ಮಲಪ್ಪುರಂ ಉಪ ಚುನಾವಣೆಯೂ ಎಪ್ರಿಲ್ 6ರಂದು ನಡೆಯಲಿದೆ.

ತಮಿಳುನಾಡಿನಲ್ಲಿಯೂ  ಒಂದೇ ಬಾರಿಗೆ ಚುನಾವಣೆ ನಡೆಯಲಿದ್ದು, ರಾಜ್ಯದ 38 ಜಿಲ್ಲೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಯಲಿದೆ.. ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಂದು  ಮತದಾನ ನಡೆಯಲಿದೆ.  ಇಲ್ಲಿ 8 ಹಂತದಲ್ಲಿ ಚುನಾವಣೆ ನಡೆಯಲಿದೆ.  ಮೊದಲ ಹಂತದ ಚುನಾವಣೆ ಮಾರ್ಚ್ 2ರಂದು ನಡೆಯಲಿದೆ.  ಕ್ರಮವಾಗಿ ಮಾರ್ಚ್ 8ರವರೆಗೆ ಚುನಾವಣೆ ನಡೆಯಲಿದೆ.

ಇತ್ತೀಚಿನ ಸುದ್ದಿ