ಕೇವಲ ಐದು ರೂಪಾಯಿಗಾಗಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ! - Mahanayaka
8:14 PM Wednesday 11 - December 2024

ಕೇವಲ ಐದು ರೂಪಾಯಿಗಾಗಿ ಬುಡಕಟ್ಟು ಸಮುದಾಯದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

odisha
12/09/2021

ಒಡಿಶಾ: ಊಟ ಮಾಡಿದ ಬಳಿಕ ಬಿಲ್ ನೀಡುವಾಗ 5 ರೂಪಾಯಿ ಈಗ ಇಲ್ಲ ಮತ್ತೆ ನೀಡುತ್ತೇನೆ ಎಂದು ಹೇಳಿದ್ದಕ್ಕೆ ಬುಡಕಟ್ಟು ಸಮುದಾಯದ ಯುವಕನೋರ್ವನಿಗೆ  ಹೊಟೇಲ್ ಮಾಲಿಕ ಹಾಗೂ ಆತನ ಮಗ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಒಡಿಶಾದ ಕಿಯೋಂಚರ್ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಮಧು ಸಾಹುನಾ ಮಾ ಎಂಬ ಹೆಸರಿನ ಹೊಟೇಲ್ ಗೆ ಊಟಕ್ಕೆ ಬಂದಿದ್ದ ಜಿತೇಂದ್ರ ಡೆಹುರಿ ಎಂಬ ಯುವಕ ಊಟ ಮಾಡಿದ್ದು, ಊಟದ ಬಳಿಕ 45 ರೂಪಾಯಿ ಬಿಲ್ ಆಗಿದೆ ಎಂದು ಹೊಟೇಲ್ ಮಾಲಿಕ ಹೇಳಿದ್ದಾನೆ. ಆದರೆ ಜಿತೇಂದ್ರ ಬಳಿಯಲ್ಲಿ 40 ರೂಪಾಯಿ ಮಾತ್ರವೇ ಇತ್ತು. ಹಾಗಾಗಿ ಆತ ನನ್ನ ಬಳಿಯಲ್ಲಿ ಈಗ 40 ರೂಪಾಯಿ ಮಾತ್ರವೇ ಇದೆ. ಸಂಜೆ ಬಂದು 5 ರೂಪಾಯಿ ಕೊಡುತ್ತೇನೆ ಎಂದು ವಿನಂತಿಸಿಕೊಂಡಿದ್ದಾನೆ ಎನ್ನಲಾಗಿದೆ.

ಜಿತೇಂದ್ರ ಈ ರೀತಿ ಹೇಳುತ್ತಿದ್ದಂತೆಯೇ ಏಕಾಏಕಿ ಕೋಪಗೊಂಡ ಅಂಗಡಿ ಮಾಲಿಕ ಹಾಗೂ ಆತನ ಪುತ್ರ ಜಿತೇಂದ್ರಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅತೀ ಕ್ರೂರವಾಗಿ ಯುವಕನಿಗೆ ಚಿತ್ರ ಹಿಂಸೆ ನೀಡಿದ್ದಾರೆ. ಇಲ್ಲಿನ ಸ್ಥಳೀಯರು ತಕ್ಷಣವೇ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಪೊಲೀಸರು ಯಾವುದೇ ಕ್ರಮಕೈಗೊಂಡಿರುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭಿಸಿಲ್ಲ.

ಇನ್ನಷ್ಟು ಸುದ್ದಿಗಳು…

 

ಮಮತಾ ಬ್ಯಾನರ್ಜಿಯ ಸಾಧನೆಯನ್ನು ತನ್ನ ಸಾಧನೆ ಎಂದು ಜಾಹೀರಾತು ನೀಡಿದ ಯೋಗಿ ಆದಿತ್ಯನಾಥ್

ಗಣೇಶೋತ್ಸವದ ಸಂಭ್ರಮದಲ್ಲಿ ಡಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟ ಯುವಕ!

ಲಾರಿಗೆ ಜೀಪು ಡಿಕ್ಕಿ: 7 ಮಂದಿಯ ದಾರುಣ ಸಾವು, 4 ಮಂದಿಗೆ ಗಂಭೀರ ಗಾಯ

ಗುಜರಾತ್ ನ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಹೆಸರು ಅಧಿಕೃತ ಘೋಷಣೆ

ಹಾಡಹಗಲೇ ಕಾರಿನಲ್ಲಿ ಬಂದ ತಂಡದಿಂದ ಮಹಿಳೆಯನ್ನು ದೋಚಲು ಯತ್ನ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದ ಅಸಲಿಯತ್ತೇನು?

ನಸುಕಿನ ವೇಳೆ ಕಳ್ಳರಂತೆ ಬಂದು ಜಿಲ್ಲಾಡಳಿತ ದೇಗುಲ ತೆರವು ಮಾಡುತ್ತಿದೆ | ಸಂಸದ ಪ್ರತಾಪ್ ಸಿಂಹ ಆಕ್ರೋಶ

ಅರ್ಜುನ್ ಸರ್ಜಾ ವಿರುದ್ಧದ ‘ಮಿ ಟೂ’  ಪ್ರಕರಣಕ್ಕೆ ಮರುಜೀವ:  ವಿಸ್ಮಯ ಸಿನಿಮಾ ಚಿತ್ರೀಕರಣದ ವೇಳೆಯಲ್ಲೂ ಲೈಂಗಿಕ ದೌರ್ಜನ್ಯ?

ನೀರಲ್ಲಿ ಮುಳುಗಿದ ಮಕ್ಕಳು “ಅಪ್ಪಾ… ಕಾಪಾಡು” ಎಂದು ಕರೆದರೂ ಕಾಪಾಡಲಾಗಲಿಲ್ಲ | ನೊಂದ ತಂದೆಯಿಂದ ಆತ್ಮಹತ್ಯೆ

 

 

ಇತ್ತೀಚಿನ ಸುದ್ದಿ