ಐದು ರೂಪಾಯಿ ನಾಣ್ಯ ನುಂಗಿ 4 ವರ್ಷದ ಬಾಲಕಿ ಸಾವು!
ಮೈಸೂರು: ಐದು ರೂಪಾಯಿ ನಾಣ್ಯ ನುಂಗಿ ಬಾಲಕಿಯೋರ್ವಳು ಸಾವಿಗೀಡಾದ ದಾರುಣ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದ್ದು, ನಾಣ್ಯದೊಂದಿಗೆ ಆಟವಾಡುತ್ತಿದ್ದ ಬಾಲಕಿ ಬಾಯಿಗೆ ನಾಣ್ಯವನ್ನು ಹಾಕಿಕೊಂಡಿದ್ದು, ಆಕಸ್ಮಿಕವಾಗಿ ನುಂಗಿದ್ದಾಳೆ ಎಂದು ಹೇಳಲಾಗಿದೆ.
ಮೃತಳು ನಾಲ್ಕು ವರ್ಷ ವಯಸ್ಸಿನ ಬಾಲಕಿ ಎಂದು ತಿಳಿದು ಬಂದಿದೆ. ಈಕೆ ತನ್ನ ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದಳು. ಶುಕ್ರವಾರ 5 ರೂಪಾಯಿ ನಾಣ್ಯವನ್ನು ಹಿಡಿದುಕೊಂಡು ಆಟವಾಡುತ್ತಿದ್ದಳು. ಬಳಿಕ ಆಕಸ್ಮಿಕವಾಗಿ ನಾಣ್ಯವನ್ನು ನುಂಗಿದ್ದಾಳೆ.
ನಾಣ್ಯ ಗಂಟಲಲ್ಲಿ ಸಿಕ್ಕಿ ಕೊಂಡ ಕೆಲವೇ ಹೊತ್ತಿನಲ್ಲಿ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಇನ್ನಷ್ಟು ಸುದ್ದಿಗಳು…
ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಚಳುವಳಿಗಾರ್ತಿ ವಿಜಯ ಮಹೇಶ್ ನಿಧನ
ಪೊಲೀಸರ ಎದುರೇ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರಿಗೆ ಹಲ್ಲೆ ನಡೆಸಿದ ಬಲಪಂಥೀಯರು!
8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟುಕೊಂದ ತಾಲಿಬಾನಿಗರು!
ಮೂವರು ವಿದ್ಯಾರ್ಥಿನಿಯರಿಗೆ, ನೀವು ಧರಿಸಿರುವ ಉಡುಪು ಕಳಚಿ ಎಂದ 50 ವರ್ಷದ ಪ್ರಾಂಶುಪಾಲ!
ಕಾಂಗ್ರೆಸ್ ನವರು ಚಳುವಳಿ ಮಾಡುವಷ್ಟರ ಮಟ್ಟಿಗೆ ಬೆಲೆ ಏರಿಕೆಯಾಗಿಲ್ಲ | ಸಿ.ಟಿ.ರವಿ ಹೇಳಿಕೆ
ಕುಟುಂಬ ಸಂಘಟನೆಯ ಬದಲು ಪಕ್ಷ ಸಂಘಟನೆ ಧ್ಯೇಯವಾಗಿರಲಿ | ಬಿ.ವೈ.ವಿಜಯೇಂದ್ರಗೆ ಯತ್ನಾಳ್ ಟಾಂಗ್