ಮಹಿಳಾ ಪ್ರವಾಸಿಗರಿಗೆ ರೂಮ್ ಬುಕ್ಕಿಂಗ್ ಗೆ ಶೇ. 50% ರಿಯಾಯ್ತಿ
ಬೆಂಗಳೂರು: 48 ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಮಹಿಳಾ ಪ್ರವಾಸಿಗರಿಗೆ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಮಹಿಳಾ ಪ್ರವಾಸಿಗರಿಗೆ ಪ್ರೋತ್ಸಾಹ ನೀಡಲು ರಾಜ್ಯದಲ್ಲಿ ಕ.ರಾ.ಪ್ರ.ಅ ನಿಗಮದಿಂದ ನಿರ್ವಹಣೆ ಮಾಡುತ್ತಿರುವ ಮಯೂರ್ ಗ್ರೂಪ್ ಹೋಟೆಲುಗಳಲ್ಲಿ ಕೊಠಡಿ ಬುಕ್ಕಿಂಗ್ ನಲ್ಲಿ 50% ಹಾಗೂ ಊಟೋಪಚಾರದ ಮೇಲೆ 20% ರಷ್ಟು ರಿಯಾಯತಿಯ ವಿಶೇಷ ಕೊಡುಗೆ ನೀಡಲಾಗುತ್ತಿದೆ.
ಮಾರ್ಚ್ 6 ರಿಂದ ಮಾರ್ಚ್ 10 ರವರೆಗೆ ಈ ವಿಶೇಷ ಕೊಡುಗೆ ಅನ್ವಯಿಸಲಿದ್ದು, ಕ.ರಾ.ಪ್ರ.ಅ ನಿಗಮದ ಹೋಟೆಲ್ ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುವ ಒಬ್ಬ ಮಹಿಳೆ/ ಕುಟುಂಬ/ ಗುಂಪು ಮಹಿಳಾ ಪ್ರವಾಸ ಕೈಗೊಳ್ಳುವ ಮಹಿಳಾ ಪ್ರವಾಸಿಗರಿಗೆ ಶೇ. 50 ರಷ್ಟು ರಿಯಾಯತಿಯನ್ನು ನೀಡಲಾಗುತ್ತಿದೆ. ಈ ಸೌಲಭ್ಯದ ಸದುಪಯೋಗವನ್ನು ಮಹಿಳಾ ಪ್ರವಾಸಿಗರು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಜಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿ ಮತ್ತು ಬುಕ್ಕಿಂಗ್ ಸಂಪರ್ಕಕ್ಕಾಗಿ ವಿಳಾಸ, ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಪ್ರಧಾನ ಬುಕ್ಕಿಂಗ್ ಕೇಂದ್ರ, ನೆಲಮಹಡಿ, ಯಶವಂತಪುರ ಟಿಟಿಎಂಸಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರ ವೃತ್ತ ಬೆಂಗಳೂರು-560022. 080-43344334, 8970650070, 897088880 ದೂರವಾಣಿ ಸಂಪರ್ಕಿಸಲು ಕ.ರಾ.ಪ್ರ.ಅ ನಿಗಮ ಕೋರಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw