500 ರೂ. ಕೀ ಪ್ಯಾಡ್ ಫೋನ್ ​ಗಾಗಿ ವ್ಯಕ್ತಿಯ ಕೊಲೆ - Mahanayaka
9:02 AM Thursday 12 - December 2024

500 ರೂ. ಕೀ ಪ್ಯಾಡ್ ಫೋನ್ ​ಗಾಗಿ ವ್ಯಕ್ತಿಯ ಕೊಲೆ

crime
08/03/2022

ಬೆಂಗಳೂರು: 500 ರೂಪಾಯಿಯ ಕೀ ಪ್ಯಾಡ್ ಫೋನ್ ​ಗಾಗಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕುಡಿದ ನಶೆಯಲ್ಲಿ ರಸ್ತೆಬದಿ ಮಲಗಿದ್ದವರ ಜೇಬಿನಿಂದ ಹಣ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ. ಅದರಂತೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಬಾರ್ ಮುಂದೆ ಕುಡಿದು ಮಲಗಿದ್ದ ಸತೀಶ್​ ಎಂಬಾತನ ಜೇಬಿನಲ್ಲಿದ್ದ ಮೊಬೈಲ್ ಕದಿಯಲು ಯತ್ನಿಸಿದ್ದಾನೆ.

ಕೂಡಲೇ ಎಚ್ಚರಗೊಂಡ ಸತೀಶ್​, ಆತನನ್ನು ತಡೆದಿದ್ದಾನೆ. ಬಳಿಕ ಆರೋಪಿ, ಸತೀಶ್​ ತಲೆ ಮೇಲೆ ಹ್ಯಾಲೋ ಬ್ರಿಕ್ಸ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ರಷ್ಯಾಕ್ಕೆ ಮತ್ತೊಂದು ನಷ್ಟ: ಮೇಜರ್ ಜನರಲ್ ವಿಟಾಲಿ ಗೆರಾಸಿವೊವ್ ಸಾವು

ರಷ್ಯಾ ಸೇನೆಯಿಂದ ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆ ಧ್ವಂಸ

ಸಂಬಂಧಿಕರ ಮನೆಗೆ ಬಂದಿದ್ದ ಯುವಕ ನೇಣಿಗೆ ಶರಣು

ಕದ್ದ ಬೈಕ್ ಸಮೇತ ಆರೋಪಿಯ ಬಂಧನ

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

 

ಇತ್ತೀಚಿನ ಸುದ್ದಿ