ವಿಶ್ವ ಪರಿಸರ ದಿನದಂದು 50,900 ಗಿಡಗಳನ್ನು ನೆಟ್ಟ ABVP ಕಾರ್ಯಕರ್ತರು - Mahanayaka
3:00 AM Friday 20 - September 2024

ವಿಶ್ವ ಪರಿಸರ ದಿನದಂದು 50,900 ಗಿಡಗಳನ್ನು ನೆಟ್ಟ ABVP ಕಾರ್ಯಕರ್ತರು

abvp
06/06/2021

ಮಂಗಳೂರು: ABVP ಕರ್ನಾಟಕ ವತಿಯಿಂದ ಜೂನ್ 5 ವಿಶ್ವ ಪರಿಸರ ದಿನದಂದು ಪ್ರಾರಂಭವಾದ ಕಾರ್ಯಕ್ರಮ , ಆಕ್ಸಿಜೆನ್ ಚಾಲೆಂಜ್ ಹೆಸರಿನಲ್ಲಿ ಕರ್ನಾಟಕದ 31 ಜಿಲ್ಲೆಗಳಲ್ಲಿ  972 ಸ್ಥಳಗಳಲ್ಲಿ 45,000 ಕಾರ್ಯಕರ್ತರು 50,900 ಗಿಡಗಳನ್ನು ನೆಟ್ಟಿದ್ದಾರೆ.

ಒಬ್ಬರು 5 ಗಿಡಗಳನ್ನ, ೫ ಲಕ್ಷ ಗಿಡಗಳನ್ನು, 5 ದಿನಗಳಲ್ಲಿ ನೆಡಬೇಕು ಹಾಗೂ ಒಂದು ವರ್ಷ ಸಂಪೋಷಣೆ ಮಾಡಬೇಕೆನ್ನುವ    ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಕಾರ್ಯಕ್ರಮದಲ್ಲಿ ಐಎಎಸ್ ಆಫೀಸರ್ ಗಳು ,ಪೊಲೀಸ್ ಅಧಿಕಾರಿಗಳು ,ಪೂಜ್ಯ ಸ್ವಾಮೀಜಿಗಳು, ವಿವಿ ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಅನೇಕ ಗಣ್ಯ ವ್ಯಕ್ತಿಗಳು, ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿ ಈ ಅಭಿಯಾನಕ್ಕೆ ಸಹಕರಿಸಿದ್ದಾರೆ.

ಮುಂದಿನ 5 ದಿನಗಳಲ್ಲಿ 5 ಲಕ್ಷ ಗುರಿಯನ್ನು ತಲುಪುವ ಹಿನ್ನೆಲೆಯಲ್ಲಿ, ಸಾರ್ವಜನಿಕರು, ವಿದ್ಯಾರ್ಥಿಗಳು, ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಕೃತಿಮಾತೆಯ ಈ ಅರ್ಥಪೂರ್ಣ ಕಾರ್ಯಕ್ಕೆ  ಸಹಕಾರ ನೀಡಬೇಕೆಂದು  ವಿನಂತಿಸಿಕೊಳ್ಳುತ್ತೇವೆ ಎಂದು ಮಂಗಳೂರಿನಲ್ಲಿ ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ  ತಿಳಿಸಿದ್ದಾರೆ.


Provided by

 

ಮಹಾನಾಯಕ ಮಾಧ್ಯಮದಲ್ಲಿ ನಿಮ್ಮ ಸುದ್ದಿಗಳು ಪ್ರಕಟವಾಗಬೇಕೇ? ಹಾಗಿದ್ದರೆ 9686872149 ನಂಬರ್ ಗೆ ನಿಮ್ಮ ಸುದ್ದಿಗಳನ್ನು ವಾಟ್ಸಾಪ್ ಮಾಡಿ.

ಇತ್ತೀಚಿನ ಸುದ್ದಿ