ದವಡೆಯಲ್ಲಿ ಬೆಳೆಯುವ ಅಪರೂಪದ ಗಡ್ಡೆ: 55 ವರ್ಷದ ನೈಜೀರಿಯಾದ ಪಾದ್ರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ - Mahanayaka
2:25 AM Thursday 12 - December 2024

ದವಡೆಯಲ್ಲಿ ಬೆಳೆಯುವ ಅಪರೂಪದ ಗಡ್ಡೆ: 55 ವರ್ಷದ ನೈಜೀರಿಯಾದ ಪಾದ್ರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

sarjery
27/04/2023

ಬೆಂಗಳೂರು: ದವಡೆಯಲ್ಲಿ ಬೆಳೆಯುವ ಅಪರೂಪದ ಗಡ್ಡೆ (ಅಮೆಲೋಬ್ಲಾಸ್ಟೋಮಾ) ಯಿಂದ ಬಳಲುತ್ತಿದ್ದ 55 ವರ್ಷದ ನೈಜೀರಿಯಾದ ಮೂಲಕದ ಕ್ರೈಸ್ತ ಪಾದ್ರಿಗೆ ಫೊರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ಆಂಕೊಲಾಜಿಯ ಹಿರಿಯ ನಿರ್ದೇಶಕ ಡಾ ಸಂದೀಪ್ ನಾಯಕ್ ಇಎನ್‌ಟಿ ಸಮಾಲೋಚಕಿ ಡಾ. ಆಥಿರಾ ರಾಮಕೃಷ್ಣನ್ ಮತ್ತು ಸಲಹೆಗಾರ್ತಿ ಡಾ ಸುಷ್ಮಾ ಮೆಹ್ತಾ ಅವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯ ಆಂಕೊಲಾಜಿಯ ಹಿರಿಯ ನಿರ್ದೇಶಕ ಡಾ ಸಂದೀಪ್ ನಾಯಕ್ ಮಾತನಾಡಿ, ನೈಜೀರಿಯಾ ಮೂಲಕ ಪಾದ್ರಿಯ ಬಾಯಲ್ಲಿ ಸಣ್ಣ ಗಡ್ಡೆಯೊಂದು ಕಾಣಿಸಿಕೊಂಡಿದೆ. ಅಲ್ಲಿಯೇ ಆಸ್ಪತ್ರೆಗಳಿಗೆ ತೋರಿಸಿದರೂ ಗಡ್ಡೆ ಬೆಳೆಯುವುದು ನಿಂತಿಲ್ಲ. ಮೂರು ಶಸ್ತ್ರಚಿಕಿತ್ಸೆ ನಡೆಸಿದರೂ ಸಹ ಗಡ್ಡೆ ಬೆಳೆಯುತ್ತಲೇ ಸಾಗಿದೆ.

ಇದರಿಂದ ಭಯಬೀತಗೊಂಡು ನಮ್ಮ ಆಸ್ಪತ್ರೆಗೆ ದಾಖಲಾದರು. ಇದನ್ನ ಪರಿಶೀಲಿಸಿದಾಗ ಇದು ಅಮೆಲೋಬ್ಲಾಸ್ಟೋಮಾ ಎಂಬುದು ತಿಳಿಯಿತು. ಅಂದರೆ, ದವಡೆಯಲ್ಲಿ ಬೆಳೆಯುವ ಅಪರೂಪದ ಗಡ್ಡೆ. ಈ ಗಡ್ಡೆಯು ಸುಮಾರು 15×20 ಸೆ.ಮೀ. ಬೆಳೆದು ಸಂಪೂರ್ಣ ಮುಖವನ್ನೇ ಆವರಿಸಿಕೊಳ್ಳುವಷ್ಟು ದೊಡ್ಡದಾಗಿತ್ತು. ಇದರಿಂದ ರೋಗಿಯು ಆಹಾರ ಸೇವನೆ ಮಾಡುವುದೇ ಕಷ್ಟವಾಗಿತ್ತು. ಈ ಅಪರೂಪದ ಗಡ್ಡೆಗೆ ಶಸ್ತ್ರಚಿಕಿತ್ಸೆ ನಡೆಸುವುದು ಸಹ ಸವಾಲಿನ ಕೆಲಸ. ಆದರೆ, ನಮ್ಮ ತಂಡ, ಇದನ್ನು ಸವಾಲಾಗಿ ಸ್ವೀಕರಿಸಿತು.

ಫ್ರೀ ಫೈಬುಲಾ ಫ್ಲಾಪ್‌ ತಂತ್ರವನ್ನು ಬಳಸಿಕೊಂಡು ದವಡೆಯಲ್ಲಿನ ಗಡ್ಡೆ ತೆಗೆದು, ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಗಡ್ಡೆ ತೆಗೆದ ಜಾಗದಲ್ಲಿ ದವಡೆಯ ಮೂಳೆಯನ್ನು ಮರುನಿರ್ಮಾಣ ಮಾಡಲು, ರೋಗಿಯ ಕಾಲಿನ ಮೂಳೆಯ ಸ್ವಲ್ಪ ಭಾಗವನ್ನು ಕತ್ತರಿಸಿ, 3D ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ದವಡೆಯಲ್ಲಿ ಅಳವಡಿಸಲಾಯಿತು. ಕಾಲಿನ ಮೂಳೆ ಸಹಾಯದಲ್ಲಿ ದವಡೆ ಮೂಳೆಗೆ ಸಪೋರ್ಟ್‌ ನೀಡದಿದ್ದರೆ, ರೋಗಿಯು ಬಾಯಿ ತೆರೆದು ತಿನ್ನಲು, ಆಹಾರ ಜಗಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ರಿಸ್ಕ್‌ ತೆಗೆದುಕೊಳ್ಳಲಾಯಿತು ಎಂದು ವಿವರಿಸಿದರು.

ಸದ್ಯ, ರೋಗಿಯೂ ಸಂಪೂರ್ಣ ಗುಣವಾಗಿದ್ದು, ತನ್ನ ತಾಯ್ನಾಡಿಗೆ ಹಿಂತಿರುಗಿದ್ದಾರೆ. ದವಡೆ ನೋವಿನ ಪ್ರಮಾಣ ಕಡಿಮೆಯಾದ ಬಳಿಕ ರೋಗಿಯು ಹಲ್ಲುಗಳ ಜೋಡಣೆಗೆ ಮತ್ತೊಮ್ಮೆ ಆಸ್ಪತ್ರೆಗೆ ಬರಲಿದ್ದಾರೆ ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ