5ಜಿ ಸೇವೆ ವಾಯುಯಾನ ಬಿಕ್ಕಟ್ಟಿಗೆ ಕಾರಣವಾಗಬಹುದು: ಅಮೆರಿಕ ಏರ್ ​ಲೈನ್ಸ್​ ಕಂಪನಿ ಸಿಇಒಗಳ ಎಚ್ಚರಿಕೆ - Mahanayaka
5:30 PM Wednesday 5 - February 2025

5ಜಿ ಸೇವೆ ವಾಯುಯಾನ ಬಿಕ್ಕಟ್ಟಿಗೆ ಕಾರಣವಾಗಬಹುದು: ಅಮೆರಿಕ ಏರ್ ​ಲೈನ್ಸ್​ ಕಂಪನಿ ಸಿಇಒಗಳ ಎಚ್ಚರಿಕೆ

5g
18/01/2022

ವಾಷಿಂಗ್ಟನ್: ಹೊಸ ವೈರ್‌ ಲೆಸ್ 5ಜಿ ಸೇವೆಯು ವಾಯುಯಾನ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ಯುಎಸ್ ಕಾರ್ಗೋ ಮತ್ತು ಪ್ಯಾಸೆಂಜರ್ ಏರ್‌ ಕ್ರಾಫ್ಟ್ ಆಪರೇಟರ್‌ ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚರಿಸಿದ್ದಾರೆ.

`ಈ ಪ್ರಮುಖ ಅಮೆರಿಕ ಏರ್‌ ಲೈನ್ಸ್​ ಕಂಪನಿಗಳ ಪ್ರಕಾರ, ಹೊಸ ಸೇವೆಯು ಹೆಚ್ಚಿನ ಸಂಖ್ಯೆಯ ವೈಡ್ ಬಾಡಿ ಪ್ಲೇನ್‌ಗಳನ್ನು ನಿಷ್ಪ್ರಯೋಜಕವಾಗಿಸಬಹುದು ಎಂದು ಹೇಳುತ್ತಿವೆ.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಪ್ರಕಾರ, ಇದು ಅಲ್ಟಿಮೀಟರ್‌ ಗಳು ಮತ್ತು ಕಡಿಮೆ ಗೋಚರತೆಯ ಕಾರ್ಯಾಚರಣೆಗಳಂತಹ ಸೂಕ್ಷ್ಮ ವಿಮಾನ ಉಪಕರಣಗಳ ಮೇಲೂ ಪರಿಣಾಮ ಬೀರಬಹುದು. ಅಂತಹ ಸ್ಥಿತಿಯಲ್ಲಿ ವಿಮಾನವನ್ನು ನಿರ್ವಹಿಸುವುದು ಅಪಾಯಕಾರಿ ಎಂದು ಎಚ್ಚರಿಸುತ್ತಿದೆ.

ಅಮೆರಿಕನ್ ಏರ್‌ ಲೈನ್ಸ್, ಡೆಲ್ಟಾ ಏರ್ ಲೈನ್ಸ್, ಯುನೈಟೆಡ್ ಏರ್‌ಲೈನ್ಸ್‌ ನ ಸಿಇಒಗಳು ಅಪಾಯದ ಕಾರಣದಿಂದಾಗಿ 1,100 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಬಹುದು. ಇದು ಲಕ್ಷಾಂತರ ಪ್ರಯಾಣಿಕರ ಮೇಲೆ ಪರಿಣಾಮ ಬೀರಬಹುದು. ಅವರು ಟಿಕೆಟ್‌ಗಳನ್ನು ರದ್ದುಗೊಳಿಸಲು ಒತ್ತಾಯಿಸಲಾಗುತ್ತದೆ ಎಂದು ವಿಮಾನ ಕಂಪನಿಗಳು ಎಚ್ಚರಿಸುತ್ತಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇತ್ತೀಚಿನ ಸುದ್ದಿ