ಕೋಣೆಯ ಕರ್ಟನ್ ಸರಿಪಡಿಸುತ್ತಿದ್ದ ವೇಳೆ 5ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು
ಮಂಗಳೂರು : ಪ್ಲ್ಯಾಟ್ ವೊಂದರ ಬಾಲ್ಕನಿಯಲ್ಲಿರುವ ಕೋಣೆಯ ಕರ್ಟನ್ ಸರಿಪಡಿಸುತ್ತಿರುವ ವೇಳೆ ಆಯತಪ್ಪಿ 5ನೇ ಮಹಡಿಯಿಂದ ಬಿದ್ದು ಬಾಲಕಿ ಮೃತಪಟ್ಟ ಘಟನೆ ಮಂಗಳೂರು ನಗರದ ಕಂಕನಾಡಿಯಲ್ಲಿ ನಡೆದಿದೆ
ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯು ಸೆಹರ್ ಇಮ್ತಿಯಾಜ್(15) ಎಂದು ಗುರುತಿಸಿದ್ದು.ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಈಕೆ ನಗರದ ಕಂಕನಾಡಿಯ ವಿಶ್ವಾಸ್ ಕ್ರೌನ್ ಎಂಬ ಅಪಾರ್ಟ್ ಮೆಂಟ್ ನಿವಾಸಿ ಇಮ್ತಿಯಾಜ್ ಎಂಬವರ ಪುತ್ರಿ. ಬಾಲಕಿ ನಿನ್ನೆ ಸಂಜೆ 4:30ರ ಸುಮಾರಿಗೆ ತಮ್ಮ ಫ್ಲ್ಯಾಟ್ ನ ಬಾಲ್ಕನಿಯ ಸೈಡ್ ಕರ್ಟನ್ ಅನ್ನು ಕುರ್ಚಿಯ ಮೇಲೆ ಹತ್ತಿ ಸರಿಪಡಿಸುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ 5ನೇ ಮಹಡಿಯಿಂದ ಕೆಳಗಡೆ ಬಿದ್ದಿದ್ದಾಳೆ.
ಈಕೆ ಬಿಜೈನ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದಳು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
104 ಗಂಟೆಗಳ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನ ರಕ್ಷಣೆ
ಕರ್ತವ್ಯ ನಿರತ ಪೊಲೀಸ್ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು!
ಕಾಶ್ಮೀರ ಹತ್ಯಾಕಾಂಡಕ್ಕೂ ದನ ಸಾಗಾಟದ ಹೆಸರಿನ ಹತ್ಯಾಕಾಂಡಕ್ಕೂ ವ್ಯತ್ಯಾಸವಿಲ್ಲ: ನಟಿ ಸಾಯಿ ಪಲ್ಲವಿ
ಪೊಲೀಸ್ ಠಾಣೆಯಲ್ಲೇ ಪಿಎಸ್ ಐ ಹರೀಶ್ ಅರೆಸ್ಟ್!
ನರೇಂದ್ರ ಮೋದಿ ನಾಯಿಗಿಂತಲೂ ಕಡೆಯಾಗಿ ಸಾಯುತ್ತಾನೆ: ನಾಲಿಗೆ ಹರಿಯಬಿಟ್ಟ ಕಾಂಗ್ರೆಸ್ ನಾಯಕ