5 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಚಿಂತಾಜನಕ ಸ್ಥಿತಿಯಲ್ಲಿ ಸಂತ್ರಸ್ತೆ - Mahanayaka
1:29 PM Thursday 12 - December 2024

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಚಿಂತಾಜನಕ ಸ್ಥಿತಿಯಲ್ಲಿ ಸಂತ್ರಸ್ತೆ

rape
24/01/2022

ಒಡಿಶಾ: ಐದು ವರ್ಷದ ಬಾಲಕಿಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ನಿನ್ನೆ ಬೆಳಗ್ಗೆ ಒಡಿಶಾದ ಪುರಿ ಪಟ್ಟಣದಲ್ಲಿ ನಡೆದಿದೆ.

ಆರೋಪಿಯನ್ನು ಮಹೇಶ್ ಮೊಹಂತಿ (35) ಎಂದು ಗುರುತಿಸಲಾಗಿದೆ. ತನ್ನ ಪೋಷಕರೊಂದಿಗೆ ಬಾಲಕಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಈತನ ಮನೆಯ ಕೆಲವು ನವೀಕರಣ ಕಾರ್ಯಗಳು ನಡೆಯುತ್ತಿರುವುದರಿಂದ ಸಂತ್ರಸ್ತೆಯ ಮನೆಯ ಪಕ್ಕದ ಬಾಡಿಗೆ ಮನೆಯಲ್ಲಿ ಕೆಲ ದಿನಗಳವರೆಗೆ  ಆರೋಪಿ ವಾಸವಾಗಿದ್ದ. ಆರೋಪಿ ತನ್ನ ಸ್ವಂತ ಮನೆಗೆ ತೆರಳಿದ ಮೇಲೂ ಕೂಡ ಅನ್ಯೋನ್ಯವಾಗಿದ್ದ ಈ ಕುಟುಂಬವನ್ನು ಆಗಾಗ ಭೇಟಿ ಮಾಡುತ್ತಿದ್ದ. ಭಾನುವಾರ ಬೆಳಗ್ಗೆ ಕೂಡ ಈತ ಬಂದಾಗ ಬಾಲಕಿ ಮನೆಯ ಹೊರಗೆ ಒಂಟಿಯಾಗಿ ಆಟವಾಡುತ್ತಿರುವುದನ್ನು ಕಂಡಿದ್ದಾನೆ. ಮನೆಯ ಛಾವಣಿ ಮೇಲೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಈತ ಪರಾರಿಯಾಗುತ್ತಿರುವುದನ್ನು ಕೆಲವರು ನೋಡಿದ್ದಾರೆ ಎನ್ನಲಾಗಿದೆ.

ಈ ಘಟನೆಯಿಂದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಬಾಲಕಿಯನ್ನು ಪುರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಾಲಕಿಯನ್ನು ಕಟಕ್‌ ನಲ್ಲಿರುವ ಎಸ್​ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಹಿಡಿಯಲು ವಿಶೇಷ ತಂಡವನ್ನ ರಚಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ?: ಶಾಸಕ ರೇಣುಕಾಚಾರ್ಯ

ಯೆಮೆನ್ ಬಂಡುಕೋರರ ದಾಳಿ: ಇಬ್ಬರು ಭಾರತೀಯರ ಸಾವು

ಮಕ್ಕಳನ್ನು ಹೆದರಿಸಲು ಗುಂಡು ಹಾರಿಸಿದ ಸಚಿವರ ಪುತ್ರನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

ಮತ್ತೋರ್ವ ಬಿಜೆಪಿ ಶಾಸಕ ರಾಜೀನಾಮೆ; ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

ಗುರಿ ತಪ್ಪಿದ ಗುಂಡು: 8 ವರ್ಷದ ಬಾಲಕಿ ಬಲಿ

 

ಇತ್ತೀಚಿನ ಸುದ್ದಿ