ಶಾಲೆಯಲ್ಲಿ ಸರಣಿ ಬಾಂಬ್ ಸ್ಫೋಟ: ಮಕ್ಕಳ ಸಹಿತ 6 ಮಂದಿಯ ದಾರುಣ ಸಾವು - Mahanayaka
2:57 PM Thursday 12 - December 2024

ಶಾಲೆಯಲ್ಲಿ ಸರಣಿ ಬಾಂಬ್ ಸ್ಫೋಟ: ಮಕ್ಕಳ ಸಹಿತ 6 ಮಂದಿಯ ದಾರುಣ ಸಾವು

kabul
19/04/2022

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ.  ಪಶ್ಚಿಮ ಕಾಬೂಲ್‌ನ ಅಬ್ದುಲ್ ರಹೀಮ್ ಶಾಹಿದ್ ಹೈಸ್ಕೂಲ್‌ ಸೇರಿದಂತೆ ಮೂರು ಕಡೆಗಳಲ್ಲಿ ಸರಣಿ ಬಾಂಬ್ ದಾಳಿ ನಡೆದಿದ್ದು,  ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಕಾಬೂಲ್ ಪೊಲೀಸರು ಖಚಿತಪಡಿಸಿದ್ದಾರೆ.

ಉತ್ತರದ ನಗರವಾದ ದಸ್ತ್-ಎ-ಬರ್ಚಿ  ಪ್ರಾಂತ್ಯದಲ್ಲಿ  ಬಾಂಬ್ ದಾಳಿ ನಡೆದಿದೆ.  ದಾಳಿಯಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಸದ್ರಾನ್ ಖಚಿತಪಡಿಸಿದ್ದಾರೆ.  ಆದರೆ ಸಾವಿನ ಸಂಖ್ಯೆಯನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ ಎಂದು ಹೇಳಿದ್ದಾರೆ.

ಶಾಲೆಯ ಮೇಲೆ ಆತ್ಮಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಸ್ಫೋಟದಲ್ಲಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಶಿಕ್ಷಕರೊಬ್ಬರು ವಿವರ ನೀಡಿದ್ದಾರೆ. ಶಾಲೆಯ ಮುಂದೆ ಮಕ್ಕಳ ಗುಂಪು ನಿಂತಿದ್ದಾಗ ದಾಳಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ  ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.  ಗುಂಪಿನಲ್ಲಿ ಮಕ್ಕಳಿದ್ದಾರೆ ಎಂದು ಎಹ್ಸಾನ್ ಟ್ವಿಟರ್‌ ನಲ್ಲಿ ಬರೆದಿದ್ದಾರೆ.  ಬೆಳಗ್ಗೆ ತರಗತಿ ಮುಗಿಸಿ ಮಕ್ಕಳು ಹೊರಗೆ ಬಂದಾಗ ದಾಳಿ ನಡೆದಿದೆ.

ಎರಡನೆಯ ಸ್ಪೋಟ ಪಶ್ಚಿಮ ಕಾಬೂಲ್‌ ನಲ್ಲಿರುವ ಮುಮ್ತಾಜ್ ತರಬೇತಿ ಕೇಂದ್ರದ ಎದುರು ಬಾಂಬ್ ದಾಳಿ ನಡೆದಿದೆ.  ದಾಳಿಕೋರರು ಇಲ್ಲಿ ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ ಎಂದು ವರದಿಯಾಗಿದೆ.  ದಾಳಿಯಲ್ಲಿ ಕನಿಷ್ಠ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾಳಿಯ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.  ಈ ಹಿಂದೆ, ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯು ಅಫ್ಘಾನಿಸ್ತಾನದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೋವಿಡ್ ಅನಿರೀಕ್ಷಿತ ಏರಿಕೆ: ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯ ಮುಂಬೈಗೆ ಸ್ಥಳಾಂತರ

ಮತ್ತೆ ಕ್ಷಿಪಣಿ ದಾಳಿ ಆರಂಭಿಸಿದ ರಷ್ಯಾ: 17 ಉಕ್ರೇನ್ ನಾಗರಿಕರ ಹತ್ಯೆ

ಅಮರಾವತಿಯಲ್ಲಿ ಜನಾಂಗೀಯ ಗಲಭೆ, ನಿಷೇಧಾಜ್ಞೆ ಹೇರಿಕೆ:  23 ಜನ ಬಂಧನ

ಕುಟುಂಬ ಸಹಿತ ಪ್ರಯಾಣಿಸುತ್ತಿದ್ದ ಐಎಎಸ್ ಅಧಿಕಾರಿಯ ಕಾರು ಪಲ್ಟಿ

ಅಂಬೇಡ್ಕರ್ ವಿಚಾರಧಾರೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಗೆ ಬೆದರಿಕೆ: ಶಿಕ್ಷಕ ಅಮಾನತು

ಇತ್ತೀಚಿನ ಸುದ್ದಿ