ಗ್ಯಾಸ್ಟ್ರಿಕ್, ಹುಳಿತೇಗು ಕಿರಿಕಿರಿಯಿಂದ ಮುಕ್ತಿ ಪಡೆಯುವುದು ಹೇಗೆ? - Mahanayaka
9:57 AM Wednesday 11 - December 2024

ಗ್ಯಾಸ್ಟ್ರಿಕ್, ಹುಳಿತೇಗು ಕಿರಿಕಿರಿಯಿಂದ ಮುಕ್ತಿ ಪಡೆಯುವುದು ಹೇಗೆ?

gastric
19/08/2021

ಹುಳಿತೇಗು ಮತ್ತು ಗ್ಯಾಸ್ಟ್ರಿಕ್ ಮನುಷ್ಯನನ್ನು ಕೊಲ್ಲದೆ ಕೊಲ್ಲುವ ರೋಗವಾಗಿದೆ. ಒಬ್ಬ ಮನುಷ್ಯನನ್ನು ಸದಾ ಹಿಂಸೆಗೆ ತಳ್ಳುತ್ತಿರುವ ಸಮಸ್ಯೆ ಇದಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಅಥವಾ ಯಾವುದೇ ಕೆಲಸಗಳನ್ನು ಮಾಡುತ್ತಿರುವ ಸಂದರ್ಭಗಳಲ್ಲಿ ಹೊಟ್ಟೆ ಕಟ್ಟಿದಂತಾಗುವುದು, ಉಸಿರು ಕಟ್ಟಿದಂತಾಗುವುದು, ಎದೆನೋವುಂಟಾದಂತಾಗುವುದು, ಹೀಗೆ ಅನೇಕ ರೀತಿಯಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಮನುಷ್ಯನ ಉತ್ಸಾಹವನ್ನು ಕಳೆಯು ಈ ಸಮಸ್ಯೆಯನ್ನು ನಾವು ಆಹಾರದ ನಿಯಂತ್ರಣದ ಮೂಲಕವಾಗಿ ನಿಯಂತ್ರಣದಲ್ಲಿಡಬಹುದು.

ಬಾಳೆಹಣ್ಣು: ಈ ರೀತಿಯ ಸಮಸ್ಯೆ ಎದುರಿಸುತ್ತಿರುವವರಿಗೆ  ಬಾಳೆ ಹಣ್ಣು ಉತ್ತಮವಾದ ಆಹಾರವಾಗಿದೆ. ಇದು ಅಸಿಡಿಟಿಯನ್ನು ತೆಗೆದು ಹಾಕುವುದಲ್ಲದೇ ಮಲಬದ್ಧತೆಯ ಸಮಸ್ಯೆಗಳನ್ನು ಕೂಡ ನಿವಾರಿಸುತ್ತದೆ.

ಪುದೀನ: ಪುದೀನವನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಹೊಟ್ಟೆ ಕಟ್ಟಿದಂತಹ ಸಮಸ್ಯೆಗೆ ಪುದೀನ ಉತ್ತಮವಾಗಿದೆ. ಕುದಿಸಿದ ನೀರಿಗೆ  ಪುದೀನ ಎಲೆಗಳನ್ನು ಹಾಕಿ ಆರಿಸಿ ಕುಡಿಯುವುದರಿಂದ ಉಬ್ಬಿದ ಹೊಟ್ಟೆಯಿಂದ ರಿಲೀಫ್ ಸಿಗುತ್ತದೆ. ಬ್ಲ್ಯಾಕ್ ಚಹಾಕ್ಕೆ ಪುದೀನ ಎಲೆಯನ್ನು ಹಾಕಿಯೂ ಸೇವಿಸಬಹುದು.

ಶುಂಠಿ: ನಮ್ಮ ಆಹಾರದಲ್ಲಿ ಶುಂಠಿಯನ್ನು ಬಳಸುವುದು ಉತ್ತಮವಾಗಿದೆ. ಯಾಕೆಂದರೆ, ಶುಂಠಿಯಲ್ಲಿ  ಜೀರ್ಣ ಕ್ರಿಯೆಯನ್ನು ಸುಧಾರಿಸುವ ಗುಣ ಇದೆ. ಮಾತ್ರವಲ್ಲದೇ ಹುಳಿ ತೇಗು ಮೊದಲಾದ ಸಮಸ್ಯೆಗಳನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ.

ಜೀರಿಗೆ: ಕುದಿಸಿದ ನೀರಿಗೆ ಜೀರಿಗೆಯನ್ನು ಹಾಕಿ ಆರಿಸಿಡಬೇಕು. ಊಟದ ಬಳಿಕ ಜೀರಿಗೆ ನೀರನ್ನು ಕುಡಿಯುವುದರಿಂದ ಹೊಟ್ಟೆ ನೋವು ಮತ್ತು ಹುಳಿತೇಗು ಕಿರಿಕಿರಿಯಿಂದ ಮುಕ್ತಿ ಹೊಂದಬಹುದು.

ಕ್ಯಾರೆಟ್: ಪ್ರತೀ ದಿನ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹುಳಿತೇಗು, ಮಲಬದ್ಧತೆ, ಅಜೀರ್ಣ ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದಾಗಿದೆ.

ಸ್ಟ್ರಾಬೆರಿ:  ಸ್ಟ್ರಾಬೆರಿ ಕೂಡ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿದೆ. ಊಟದ ನಂತರ ಸ್ಟ್ರಾಬೆರಿ ತಿನ್ನುವುದು ಉತ್ತಮ ಎಂದು ಆಹಾರ ತಜ್ಞರು ಹೇಳುತ್ತಾರೆ.

ಇತ್ತೀಚಿನ ಸುದ್ದಿ