ಕಳೆದ 6 ವರ್ಷಗಳಿಂದ ಈ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನೇ ನೇಮಿಸಿಲ್ಲ! - Mahanayaka
12:11 AM Thursday 12 - December 2024

ಕಳೆದ 6 ವರ್ಷಗಳಿಂದ ಈ ಶಾಲೆಗೆ ಇಂಗ್ಲಿಷ್ ಶಿಕ್ಷಕರನ್ನೇ ನೇಮಿಸಿಲ್ಲ!

kadadi school gadaga
23/09/2021

ಗದಗ: ಕಡ್ಡಾಯ ಶಿಕ್ಷಣ ಎಂದು ಸರ್ಕಾರ ನೂರಾರು ಯೋಜನೆಗಳನ್ನು ಮಾಡಿದೆ. ಆದರೆ, ಗದಗದಲ್ಲಿ ಕಳೆದ 6 ವರ್ಷಗಳಿಂದ ಹೈಸ್ಕೂಲ್ ವೊಂದರಲ್ಲಿ ಇಂಗ್ಲಿಷ್ ಶಿಕ್ಷಕರನ್ನೇ ನೇಮಕ ಮಾಡಿಲ್ಲ. ಇದೀಗ ವಿದ್ಯಾರ್ಥಿಗಳ ತಾಳ್ಮೆಯ ಕಟ್ಟೆ ಹೊಡೆದು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಗದಗ ತಾಲೂಕಿನ ಕದಡಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಿಇಓ  ಕಾಲಿಗೆ ಬಿದ್ದು, ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿದ ಘಟನೆ ಕೂಡ ನಡೆಯಿತು.

ಈ ಗ್ರಾಮದಲ್ಲಿ ಇದ್ದ ಒಬ್ಬ ಇಂಗ್ಲಿಷ್ ಶಿಕ್ಷಕರನ್ನು ನಿಯಮ ಬಾಹಿರವಾಗಿ ಬೇರೆ ಜಿಲ್ಲೆಗೆ ನಿಯೋಜನೆ ಗೊಳಿಸಲಾಗಿತ್ತು.  ಕಳೆದ 6 ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ, ಅಧಿಕಾರಿಗಳು ಶಿಕ್ಷಕರನ್ನು ನೇಮಿಸದೇ ನಿರ್ಲಕ್ಷ್ಯ ವಹಿಸಿದ್ದರು. ಇಂದು ಗ್ರಾಮಕ್ಕೆ ಬಿಇಓ ಆಗಮಿಸಿದಾಗ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆದಿದ್ದು, ಇದೇ ವೇಳೆ ಮಹಿಳೆಯೊಬ್ಬರು ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡಿದ್ದು, ಅಧಿಕಾರಿಗಳನ್ನು ನಡುಗಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡದೇ ಕಳೆದ 6 ವರ್ಷಗಳಿಂದ ವಿದ್ಯಾರ್ಥಿಗಳ ಜೀವನದಲ್ಲಿ ಅಧಿಕಾರಿಗಳು ಆಟವಾಡಿದ್ದಾರೆ. ಹೀಗಾದರೆ, ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಗುಣಮಟ್ಟ ಸುಧಾರಿಸುವುದಾದರೂ ಹೇಗೆ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಇಓಗೆ ಕ್ಲಾಸ್ ತೆಗೆದ ಗ್ರಾಮಸ್ಥರು, ನೀವು ನಿಮ್ಮ ಮಕ್ಕಳನ್ನು ಲಕ್ಷ ಲಕ್ಷ ಸಂಬಳ ತೆಗೆದುಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸುತ್ತೀರಿ ನಮ್ಮ ಮಕ್ಕಳ ಬಗ್ಗೆ ನೀವೆಲ್ಲ ಸ್ವಲ್ಪವೂ ಯೋಚಿಸುವುದಿಲ್ಲ. ಕರುಣೆಯೇ ಇಲ್ಲದವರಂತೆ ವರ್ತಿಸುತ್ತಿದ್ದೀರಿ ಎಂದು ತರಾಟೆಗೆತ್ತಿಕೊಂಡಿದ್ದಾರೆ.

ಒಬ್ಬ ಶಿಕ್ಷಕಿಯನ್ನು ನಿಯಮ ಬಾಹಿರವಾಗಿ ನಿಯೋಜನೆ ಮಾಡಿರುವುದನ್ನು ತಡೆಯಲು ಸಾಧ್ಯವಾಗದ ನೀವ್ಯಾಕೆ ನೌಕರಿ ಮಾಡುತ್ತೀರಿ ಎಂಬ ಗ್ರಾಮಸ್ಥರ ಪ್ರಶ್ನೆಗೆ ಬೆಚ್ಚಿ ಬಿದ್ದ ಅಧಿಕಾರಿಗಳು ತಕ್ಷಣವೇ ಈ ಹಿಂದಿನ ಇಂಗ್ಲಿಷ್ ಶಿಕ್ಷಕಿ ಪಲ್ಲವಿ ಎಂಬವರನ್ನು ಕದಡಿ ಹೈಸ್ಕೂಲ್ ಗೆ ಹಾಜರಾಗಬೇಕು ಎಂದು ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ಲಾಲ್ ಬಹದ್ದೂರು ಶಾಸ್ತ್ರಿಯವರಂತೆಯೇ, ಪ್ರಧಾನಿ ಮೋದಿ ಫೋಟೋ | ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೋ ಚರ್ಚೆ?

ಶಾಕಿಂಗ್ ನ್ಯೂಸ್: ತಾನು ತೊಟ್ಟಿದ್ದ ಮಾಸ್ಕ್ ಬಿಚ್ಚಿ ಮಾಜಿ ಸಂಸದಗೆ ತೊಡಿಸಿದ ಕೇಂದ್ರ ಸಚಿವ!

ಬಿಜೆಪಿ ನಾಯಕರೊಬ್ಬರ ಕಚೇರಿಯಲ್ಲಿ  ಮಹಿಳಾ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ!

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ: ಗ್ಯಾಸ್ ಸಿಲಿಂಡರ್ ಸಿಡಿದು ಮೂವರು ಸಾವು

ಪತ್ನಿಯ ಕುತ್ತಿಗೆಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ!

ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದ ಅರ್ಚಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ!

ಉಂಡು ಮಲಗಿದರೂ ಮುಗಿಯಲಿಲ್ಲ ಗಂಡ ಹೆಂಡಿರ ಜಗಳ: ಪೊಲೀಸ್ ಠಾಣೆ ಎದುರು ಹಿಗ್ಗಾಮುಗ್ಗಾ ಥಳಿತ!

ಇತ್ತೀಚಿನ ಸುದ್ದಿ