6 ವರ್ಷದ ಬಾಲಕಿಯ ಮೇಲೆ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ | ತಂದೆಯ ಪಾಪ ಮುಚ್ಚಿ ಹಾಕಲು ಆರೋಪಿಯ ಪುತ್ರನಿಂದ  ಯತ್ನ! - Mahanayaka
8:07 PM Wednesday 11 - December 2024

6 ವರ್ಷದ ಬಾಲಕಿಯ ಮೇಲೆ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ | ತಂದೆಯ ಪಾಪ ಮುಚ್ಚಿ ಹಾಕಲು ಆರೋಪಿಯ ಪುತ್ರನಿಂದ  ಯತ್ನ!

25/02/2021

ಕೋಲಾರ:  6 ವರ್ಷದ ಬಾಲಕಿಯ ಮೇಲೆ 60 ವರ್ಷದ ವೃದ್ಧನೋರ್ವ ನೀಚ ಕೃತ್ಯ ಎಸಗಿದ ಘಟನೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದ್ದು, ತನ್ನ ಮೊಮ್ಮಗಳ ವಯಸ್ಸಿನ ಮಗುವಿನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ.

60 ವರ್ಷ ವಯಸ್ಸಿನ ತಿಮ್ಮಪ್ಪ ಎಂಬಾತ 6 ವರ್ಷದ ಬಾಲಕಿಗೆ ಚಾಕೋಲೇಟ್  ನೀಡುವ ನೆಪದಲ್ಲಿ ಬಾಲಕಿಯನ್ನು ಬಳಿ ಕರೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಮದು ಹೇಳಲಾಗಿದೆ.

ಘಟನೆ ಬೆಳಕಿಗೆ ಬಂದ ಬಳಿಕ ಆರೋಪಿ ತಿಮ್ಮಪ್ಪನ ಪುತ್ರ ಕುಮಾರ್ ಎಂಬಾತ ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಹೇಳಲಾಗಿದೆ.  ಈ ಕುಮಾರ್ ಎಂಬಾತ ಗ್ರಾಮ ಪಂಚಾಯತ್ ಸದಸ್ಯನಾಗಿದ್ದಾನೆ.

ಈ ಬೆದರಿಕೆಗಳಿಗೆ ಜಗ್ಗದ ಬಾಲಕಿಯ ಪೋಷಕರು ಸಮುದಾಯದ ಮುಖಂಡರ ಬೆಂಬಲದೊಂದಿಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ