6 ವರ್ಷದ ಬಾಲಕಿಯ 3 ವರ್ಷ ಅತ್ಯಾಚಾರ ನಡೆಸಿ ಹತ್ಯೆಗೈದ ಸಿಪಿಐಎಂ ಯುವ ನಾಯಕ - Mahanayaka
1:21 AM Wednesday 11 - December 2024

6 ವರ್ಷದ ಬಾಲಕಿಯ 3 ವರ್ಷ ಅತ್ಯಾಚಾರ ನಡೆಸಿ ಹತ್ಯೆಗೈದ ಸಿಪಿಐಎಂ ಯುವ ನಾಯಕ

arjun cpim
06/07/2021

ಇಡುಕ್ಕಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಯುವ ವಿಭಾಗದ ನಾಯಕನೋರ್ವ 6 ವರ್ಷದ ಬಾಲಕಿಯನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಬಳಿಕ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಿಂದ ವರದಿಯಾಗಿದೆ.

ಜೂನ್ 30ರಂದು ಬಾಲಕಿ ಆಟವಾಡುತ್ತಿದ್ದ ವೇಳೆ ಆಕೆಯ ಕುತ್ತಿಗೆಗೆ ಶಾಲು ಸಿಲುಕಿಕೊಂಡಿದೆ ಎನ್ನುವ ಪ್ರಕರಣವೊಂದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಕೂಡ ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು ಎನ್ನಲಾಗಿದೆ. ಆದರೆ, ಇದಾದ ಬಳಿಕ ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ಬಂದ ವೇಳೇ ಬಾಲಕಿಯು ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು ಎನ್ನುವ ಸಂಗತಿ ಬಯಲಾಗಿದೆ.

ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಲಾಗಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ತಕ್ಷಣವೇ ನಾಲ್ವರು ಶಂಕಿತರನ್ನು ಬಂಧಿಸಿದ್ದು, ಈ ಪೈಕಿ 22 ವರ್ಷ ವಯಸ್ಸಿನ ಅರ್ಜುನ್ ಎಂಬಾತನ ಕೈವಾಡ ಬಯಲಾಗಿದೆ.

ಅರ್ಜುನ್ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಸಕ್ರಿಯನಾಗಿದ್ದು, ಆರೋಪಿಯು ಕಳೆದ ಮೂರು ವರ್ಷಗಳಿಂದ ಬಾಲಕಿಗೆ ಸ್ವೀಟ್ ಕೊಡಿಸುವ ಆಮಿಷವೊಡ್ಡಿ ಆಕೆಯನ್ನು ಭೇಟಿಯಾಗುತ್ತಿದ್ದು, ಆಕೆಯನ್ನು ಅತ್ಯಾಚಾರ ನಡೆಸುತ್ತಿದ್ದ. ಜೂನ್ 30ರಂದು ಕೂಡ ಆಕೆಯ ಮನೆಯ ಕೋಣೆಗೆ ಹೋಗಿ ಅತ್ಯಾಚಾರ ನಡೆಸಿದ್ದು, ಈ ವೇಳೆ ಬಾಲಕಿ ಮೂರ್ಛೆ ಹೋಗಿದ್ದಾಳೆ. ಬಾಲಕಿ ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದ ಆರೋಪಿ ಅರ್ಜುನ್, ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ನೇಣುಹಾಕಿದ್ದ. ಆ ಬಳಿಕ ಆಟವಾಡುತ್ತಿದ್ದಾಗ ಶಾಲು ಬಿಗಿದ ಸ್ಥಿತಿಯಲ್ಲಿರಿಸಿ, ಬಾಲಕಿಯ ಆಕಸ್ಮಿಕ ಸಾವಿನ ಸುದ್ದಿಯನ್ನು ಹರಡಿದ್ದ ಎಂದು ತಿಳಿದು ಬಂದಿದೆ.

ಘಟನೆ ಸಂದರ್ಭದಲ್ಲಿ ಬಾಲಕಿಯ ಪೋಷಕರು ಕೆಲಸ ಕಾರಣ ಮನೆಯಿಂದ ಹೊರಹೋಗಿದ್ದರು. ಮೊದಲು ಬಾಲಕಿಯ ಮೃತದೇಹವನ್ನು ಆಕೆಯ ಸಹೋದರ ನೋಡಿದ್ದ.

ಇನ್ನೂ ಆರೋಪಿ ಅರ್ಜುನ್ ಕಮ್ಯುನಿಸ್ಟ್ ಪಕ್ಷದಲ್ಲಿ ಸಕ್ರಿಯನಾಗಿದ್ದ ಸ್ಥಳೀಯವಾಗಿ ಸಾಮಾಜಿಕ ಕೆಲಸದಲ್ಲಿಯೂ ತೊಡಗಿದ್ದು, ಕೊವಿಡ್ 19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವಿಶೇಷ ಸ್ವಯಂ ಸೇವಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ