ಬಯಲಾಗುತ್ತಿದೆ ಇಸ್ರೇಲ್ ಕ್ರೌರ್ಯ: ಯಾವುದೇ ತಪ್ಪು ಮಾಡದ 62 ವರ್ಷದ ಮಹಿಳೆಯನ್ನು ಬಂಧಿಸಿ ಕಿರುಕುಳ

25/01/2025

ಕದನ ವಿರಾಮ ಒಪ್ಪಂದದಂತೆ ಇಸ್ರೇಲ್ ಬಿಡುಗಡೆಗೊಳಿಸಿದ 90 ಮಂದಿಯಲ್ಲಿ ದಾನಿಯಾ ಹನಾತ್ ಕೂಡ ಒಬ್ಬರು. 2023 ನವಂಬರ್ ನಲ್ಲಿ ದಾನಿಯಾ ಅವರನ್ನು ಇಸ್ರೇಲ್ ಸೇನೆ ಬಂಧಿಸಿತು. ದಿನಗಳ ನಂತರ ಇವರನ್ನು ಬಿಡುಗಡೆಗೊಳಿಸಲಾಯಿತು. ಆದರೆ ಕಳೆದ ಆಗಸ್ಟ್ ನಲ್ಲಿ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಇಸ್ರೇಲ್ ಯೋಧರು ಮನೆಯೊಳಗೆ ನುಗ್ಗಿ ಬಂದೂಕು ತೋರಿಸಿ ದಾನಿಯಾ ಅವರನ್ನು ಮತ್ತೊಮ್ಮೆ ಬಂಧಿಸಿದ್ದರು.

ಯಾವ ಕಾರಣಕ್ಕಾಗಿ ಅರೆಸ್ಟ್ ಮಾಡಲಾಗಿದೆ ಎಂದು ಕೂಡ ಯೋಧರು ತಿಳಿಸಲಿಲ್ಲ. ಭಯೋತ್ಪಾದನೆಗೆ ಸಹಾಯ ಮಾಡಿದ್ದಾರೆ ಎಂಬುದಾಗಿ ಇಸ್ರೇಲ್ ಕಾನೂನು ಸಚಿವಾಲಯದ ದಾಖಲೆಗಳು ಹೇಳುತ್ತೆ. ಆದರೆ ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಳ್ಳದ ದಾನಿಯಾ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಆರೋಪವನ್ನು ಹೊರಿಸಿಲ್ಲ ಮತ್ತು ಅವರನ್ನು ಯಾವುದೇ ವಿಚಾರಣೆಗೆ ಒಳಪಡಿಸಿಲ್ಲ.
ಇದು ಓರ್ವ ದಾನಿಯಾರ ಕಥೆಯಲ್ಲ. 15 ತಿಂಗಳ ಕಾಲ ನಡೆದ ಇಸ್ರೇಲ್ ದಾಳಿಯ ವೇಳೆ ಸುಮಾರು 10,000 ದಷ್ಟು ಫೆಲೆಸ್ತೀನಿಯರನ್ನು ಬಂಧಿಸಲಾಗಿದೆ.

ಬಂಧನದಲ್ಲಿರುವ ಹೆಚ್ಚಿನವರಿಗೆ ತಾವು ಮಾಡಿರುವ ಅಪರಾಧ ಏನೆಂದೇ ಗೊತ್ತಿಲ್ಲ. ವಿಚಾರಣೆಯನ್ನೂ ನಡೆಸದೆ ಮತ್ತು ದೋಷಾರೋಪ ಪಟ್ಟಿಯನ್ನೂ ಸಲ್ಲಿಸದೆ ವರ್ಷಗಳ ಕಾಲ ಜೈಲಲ್ಲಿ ಕೊಳೆಯಿಸುವ ಈ ತಂತ್ರದ ಬಗ್ಗೆ ಬಂಧಿತ ಹೆತ್ತವರ ಸಮಿತಿಯ ಮುಖ್ಯಸ್ಥರಾದ ಅಂಜದ್ ಅಬು ಅಸಾಬ್ ಹಲವು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.

ಹಾಗೆಯೇ ಇಸ್ರೇಲ್ ಜೈಲಲ್ಲಿರುವ ಫೆಲಸ್ತೀನಿ ಬಂಧಿಗಳ ಪರಿಸ್ಥಿತಿ ಅತ್ಯಂತ ಕರುಣಾಜನಕವಾಗಿದೆ. ಅವರಿಗೆ ಔಷಧವನ್ನು ನೀಡುತ್ತಿಲ್ಲ. ಸರಿಯಾಗಿ ಆಹಾರವನ್ನೂ ನೀಡುತ್ತಿಲ್ಲ. ದುರ್ನಾತ ಬೀರುವ ಸೆಲ್ ಗಳಲ್ಲಿ ಅವರನ್ನು ಇರಿಸಲಾಗಿದೆ. ಯೋಧರಿಂದ ಚಿತ್ರ ಹಿಂಸೆಯನ್ನು ಎದುರಿಸುತ್ತಿದ್ದಾರೆ. ಅವರನ್ನು ಬಟ್ಟೆ ಬದಲಾಯಿಸಲೂ ಬಿಡುತ್ತಿಲ್ಲ. ತಮ್ಮ ಬಂಧುಗಳನ್ನು ಭೇಟಿಯಾಗಲೂ ಬಿಡುತ್ತಿಲ್ಲ ಎಂದು ಹಲವು ವರ್ಷಗಳಿಂದ ಜೈಲಲ್ಲಿದ್ದು ಅನುಭವವಿರುವ ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಷನ್ ಆಫ್ ಫೆಲೆ ಸ್ತೀನ್ ಸಂಘಟನೆಯ ನಾಯಕಿ ಖಾಲಿದಾ ಜರಾರ್ ಹೇಳಿದ್ದಾರೆ.

ಇತ್ತೀಚಿಗೆ ಬಿಡುಗಡೆಗೊಳಿಸಲಾದವರಲ್ಲಿ ಈ ಕಮ್ಯುನಿಸ್ಟ್ ನಾಯಕಿ ಕೂಡ ಇದ್ದಾರೆ. 62 ವರ್ಷದ ಇವರನ್ನು ಹಲವು ಬಾರಿ ಇಸ್ರೇಲ್ ಬಂಧಿಸಿ ನಿರಂತರ ಪೀಡಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version