6 ವರ್ಷದಿಂದ ಪತಿಯ ಊಟದಲ್ಲಿ ಡ್ರಗ್ಸ್ ಬೆರೆಸುತ್ತಿದ್ದ ಪತ್ನಿಯ ಬಂಧನ - Mahanayaka
10:05 AM Thursday 12 - December 2024

6 ವರ್ಷದಿಂದ ಪತಿಯ ಊಟದಲ್ಲಿ ಡ್ರಗ್ಸ್ ಬೆರೆಸುತ್ತಿದ್ದ ಪತ್ನಿಯ ಬಂಧನ

keralla
07/02/2022

ಕೇರಳ: ತನ್ನ ಹೆಸರಿಗೆ ಆಸ್ತಿ ಮಾಡದ ಪತಿಗೆ ಸ್ಲೋ ಪಾಯ್ಸನ್​ ನಂತೆ ಡ್ರಗ್ಸ್ ನೀಡುತ್ತಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಕೊಟ್ಟಾಯಂನ ಆಶಾ ಸುರೇಶ್ ಬಂಧಿತ ಮಹಿಳೆ. ಬರೋಬ್ಬರಿ 6 ವರ್ಷದಿಂದ ಪತ್ನಿ ಆಶಾ, ಪತಿಗೆ ನೀಡುವ ಊಟಕ್ಕೆ ಡ್ರಗ್ಸ್ ಮಿಕ್ಸ್ ಮಾಡಿ ಕೊಡುತ್ತಿದ್ದಳು. 2006ರಲ್ಲಿ ಆಶಾಳನ್ನು ಮದ್ವೆಯಾಗಿದ್ದ ಸುರೇಶ್​ ಆರ್ಥಿಕವಾಗಿ ಒಂದು ಮಟ್ಟಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದರು. ನಂತರ ಐಸ್ ಕ್ರೀಂ ಬ್ಯೂಸಿನೆಸ್ ಕೈಹಿಡಿದ ಹಿನ್ನಲೆಯಲ್ಲಿ ಆರ್ಥಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿತ್ತು. ಬಳಿಕ ಪಾಲಕ್ಕಾಡ್ ​ನಲ್ಲಿ ಸ್ವಂತ ಮನೆ ಖರೀದಿಸಿದರು.

ನಂತರ ಪತ್ನಿ ಆಶಾ ಪತಿಯ ಊಟದಲ್ಲಿ ಡ್ರಗ್​ ಬೆರೆಸಲು ಆರಂಭಿಸಿದ್ದಳು. ಒಂದು ಊಟ ಮಾಡುತ್ತಿದ್ದ ಪತಿಗೆ ಆರೋಗ್ಯ ಏರುಪೇರು ಕಂಡಿದೆ. ಬಳಿಕ ಪತ್ನಿಯ ಬಗ್ಗೆ ಸಂಶಯ ಬಂದು ಆಕೆಯ ಸ್ನೇಹಿತೆಯನ್ನ ಪುಸಲಾಯಿಸಿ ಊಟದಲ್ಲಿ ಏನಾದ್ರೂ ಮಿಕ್ಸ್ ಆಗ್ತಿದ್ಯಾ ಎಂಬುದರ ಬಗ್ಗೆ ಕೇಳಲು ಹೇಳಿದ್ದ.
ಆತ್ಮೀಯ ಗೆಳತಿ ಎಂಬ ಕಾರಣಕ್ಕೆ ಆಶಾ ಎಲ್ಲಾವನ್ನೂ ಬಾಯ್ಬಿಟ್ಟಾಗ ಪತಿಗೆ ಶಾಕ್ ಕಾದಿತ್ತು. ಈ ಕೃತ್ಯದಿಂದ ನೊಂದ ಪತಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಆಶಾಳನ್ನು ಬಂಧಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಣ್ಣ ಹೇಳಿದಂತೆ ಅತ್ತಿಗೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೈದುನ

ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳಿಂದ ಮೆರವಣಿಗೆ!: ಬೀದಿ ರಾಜಕೀಯ ಕ್ಯಾಂಪಸ್ ನೊಳಗೆ ನುಸುಳಿದ್ದು ಹೇಗೆ?

ಪಿಯುಸಿ ವಿದ್ಯಾರ್ಥಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣು]

ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಘೋಷಿಸಿದ ಕಾಂಗ್ರೆಸ್

ನನ್ನ ಬಟ್ಟೆ ನನ್ನ ಆಯ್ಕೆ, ನೀವ್ಯಾಕೆ ಕೇಳ್ತೀರಿ? | ನಿವೇದಿತಾ ಗೌಡ

 

ಇತ್ತೀಚಿನ ಸುದ್ದಿ