ಈ ಜಿಲ್ಲೆಯ ಫಾರಂನಲ್ಲಿ 7-8 ಸಾವಿರಕ್ಕೂ ಅಧಿಕ ಕೋಳಿಗಳ ಸಾವು? | ಹಕ್ಕಿ ಜ್ವರದ ಭೀತಿ - Mahanayaka
9:25 PM Thursday 12 - December 2024

ಈ ಜಿಲ್ಲೆಯ ಫಾರಂನಲ್ಲಿ 7-8 ಸಾವಿರಕ್ಕೂ ಅಧಿಕ ಕೋಳಿಗಳ ಸಾವು? | ಹಕ್ಕಿ ಜ್ವರದ ಭೀತಿ

16/03/2021

ದಾವಣಗೆರೆ:  ಕಳೆದ 8 ತಿಂಗಳಿನಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಪೌಲ್ಟ್ರಿ ಫಾರಂನಲ್ಲಿ 7ರಿಂದ 8 ಸಾವಿರ ಕೋಳಿಗಳು ಮೃತಪಟ್ಟಿರುವ ಘಟನೆ ನಡೆದಿದ್ದು,  ಜಿಲ್ಲೆಯಲ್ಲಿ ಕೋಳಿ ಜ್ವರದ ಭೀತಿ ಸೃಷ್ಟಿಯಾಗಿದ್ದು, ನೆರೆಯ ಜಿಲ್ಲೆಯವರೂ ಆತಂಕಕ್ಕೀಡಾಗಿದ್ದಾರೆ.

ಸತ್ತ ಕೋಳಿಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಕೊಂಡಜ್ಜಿ ಗುಡ್ಡಕ್ಕೆ ಕೊಂಡೊಯ್ಯಲಾಗುತ್ತಿದ್ದು, ಫಾರಂ ಮಾಲಿಕರು ಈ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

ಹಕ್ಕಿ ಜ್ವರದಿಂದ ಕೋಳಿಗಳು ಮೃತಪಟ್ಟಿರಬಹುದು ಎನ್ನುವುದು ತಿಳಿದರೆ,  ತಮ್ಮ ವ್ಯವಹಾರಕ್ಕೆ ತೊಂದರೆಯುಂಟಾಗಬಹುದು ಎನ್ನುವ ಸಹಜ ಭಯದಿಂದ ಮಾಲಕರು ಈ ರೀತಿ ಮಾಡಿರಬಹುದು ಎಂದು ಹೇಳಲಾಗಿದೆ.  ಇನ್ನೂ ಅಧಿಕಾರಿಗಳು ಈ ಸಂಬಂಧ ಪರಿಶೀಲನೆ ನಡೆಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ