7 ಶಾಸಕರಿಗೆ ಸಚಿವ ಸ್ಥಾನ: ಪ್ರಮಾಣ ವಚನ ಯಾವಾಗ ಗೊತ್ತಾ?
11/01/2021
ಬೆಂಗಳೂರು: ದೀರ್ಘ ಕಾಲದ ವಿಳಂಬದ ಬಳಿ ಇದೀಗ ಸಚಿವ ಸಂಪುಟ ವಿಸ್ತರಣೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ನಿಂದ ಅನುಮತಿ ದೊರೆತಿದ್ದು, ಭಾನುವಾರ ಅವರು ದೆಹಲಿಗೆ ಹೋಗಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಂಡಿದ್ದಾರೆ.
ಮಾಹಿತಿಯ ಪ್ರಕಾರ ಏಳು ಶಾಸಕರಿಗೆ ಸಚಿವ ಸ್ಥಾನ ದೊರಕಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ ಎಂದು ತಿಳಿದು ಬಂದಿದೆ.
ಸದ್ಯ ಸಂಪುಟ ವಿಸ್ತರಣೆ ಮಾಡಲಾಗುತ್ತಿದೆಯೇ ಇಲ್ಲ, ಸಂಪುಟ ಪುನರ್ ರಚನೆಯೋ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. “13 ಅಥವಾ 14ರಂದು ಜೆ.ಪಿ.ನಡ್ಡಾ ಹಾಗೂ ಅರುಣ್ ಸಿಂಗ್ ಅವರ ಸಮಯ ನೋಡಿಕೊಂಡು ನೂತನ ಸಚಿವರ ಪ್ರಮಾಣ ವಚನಕ್ಕೆ ದಿನಾಂಕ ನಿಗದಿ ಮಾಡಲಾಗುವುದು” ಎಂದು ಯಡಿಯೂರಪ್ಪನವರು ಹೇಳಿಕೆ ನೀಡಿದ್ದಾರೆ.