28 ವರ್ಷದ ಸೊಸೆಯನ್ನೇ ಮದುವೆಯಾದ 70 ವರ್ಷದ ಚೌಕಿದಾರ್!

ಗೋರಖ್ ಪುರ: 70 ವರ್ಷದ ವ್ಯಕ್ತಿಯೋರ್ವ ತನ್ನ 28 ವರ್ಷದ ಸೊಸೆಯನ್ನು ಮದುವೆಯಾದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗೋರಖ್ ಪುರ ದ ಛಾಪಿಯಾ ಉಮಾರೋ ಗ್ರಾಮದಲ್ಲಿ ನಡೆದಿದೆ.
ಈ ಜೋಡಿಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಬರ್ಹಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಚೌಕಿದಾರ್ ಆಗಿ ಕೆಲಸ ಮಾಡುತ್ತಿರುವ ಕೈಲಾಶ್ ಯಾದವ್ ಎಂಬಾತ ತನ್ನ ಸೊಸೆಯನ್ನೇ ವಿವಾಹವಾಗಿದ್ದಾನೆ.
ಕೈಲಾಶ್ ಯಾದವ್ 12 ವರ್ಷಗಳ ಹಿಂದೆ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ. ಇದಾದ ಬಳಿಕ ಆತನ ಮೂರನೇ ಮಗ ಕೂಡ ಸಾವನ್ನಪ್ಪಿದ್ದ. ಮಗ ಸಾವನ್ನಪ್ಪಿದ ಬಳಿಕ ಕೈಲಾಶ್ ತನ್ನ ಸೊಸೆಯನ್ನೇ ಸದ್ದಿಲ್ಲದೇ ವಿವಾಹವಾಗಿದ್ದು, ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಇನ್ನೂ ವೈರಲ್ ಫೋಟೋದ ಬಗ್ಗೆ ವಿಚಾರಿಸುವುದಾಗಿ ಬರ್ಹಲ್ ಗಂಜ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜೆ.ಎನ್.ಶುಕ್ಲಾ ಅವರು ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw