70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ವೃದ್ಧೆ
ಮೋರಾ: ವೃದ್ಧೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಿದ ಘಟನೆ ಗುಜರಾತ್ ನ ಮೋರಾದಲ್ಲಿ ನಡೆದಿದ್ದು, ಇವರು ವಿಶ್ವದ ಅತ್ಯಂತ ಹಿರಿಯ ತಾಯಂದಿರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಜೀವನ್ ಬೆನ್ ರಬಾರಿ ಎಂಬ ವೃದ್ಧೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಅವರ ಪತಿ 75 ವರ್ಷ ವಯಸ್ಸಿನ ಮಾಲ್ಧಾರಿ ಅವರ ಆಸೆಯನ್ನು ಈಡೇರಿಸಿದ್ದಾರೆ. ಐವಿಎಫ್ ಮೂಲಕ ಜೀವನ್ ಬೆನ್ ರಬಾರಿ ಗರ್ಭಧರಿಸಿದ್ದರು.
ರಬಾರಿ ಮತ್ತು ಮಾಲ್ಧಾರಿ ಮದುವೆಯಾದ 45 ವರ್ಷಗಳ ಬಳಿಕ ಮಗು ಜನಿಸಿದೆ. ಇವರಿಗೆ ಹೆರಿಗೆ ಮಾಡಿಸಿರುವ ವೈದ್ಯ ನರೇಶ್ ಭಾನುಶಾಲಿ ಮಾತನಾಡಿ, ಇದು ನಾನು ಕಂಡ ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ನಿರ್ಲಜ್ಜ, ನೀಚ ರಾಜಕಾರಣಿಗಳ ಬದಲು ಹಿಂದೂ ಸಂಘಟನೆಗಳಿಗೆ ಬಲ ತುಂಬಿ: ಬಿಜೆಪಿ ವಿರುದ್ಧ ಮುತಾಲಿಕ್ ಪರೋಕ್ಷ ಕಿಡಿ
“ರಾಹುಲ್ ಗಾಂಧಿ ಡ್ರಗ್ಸ್ ಪೆಡ್ಲರ್” ಎಂಬ ನಳಿನ್ ಹೇಳಿಕೆ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
ಐವನ್ ಡಿಸೋಜ ಮನೆಗೆ ನುಗ್ಗಲು ಬಜರಂಗದಳದ ಕಾರ್ಯಕರ್ತರಿಂದ ಯತ್ನ: 8 ಮಂದಿ ಅರೆಸ್ಟ್
ವೈಯಕ್ತಿಕ ಟೀಕೆಗೆ ತಿರುಗಿದ ರಾಜಕೀಯ ಕೆಸರಾಟ: ಕುಮಾರಸ್ವಾಮಿಯ ಎರಡನೇ ಮದುವೆ ಬಗ್ಗೆ ಬಿಜೆಪಿ ಟಾಂಗ್