70 ದಂಪತಿಗಳಿಗೆ ವಂಚಿಸಿದ ನಕಲಿ ವೈದ್ಯೆ: ಮಕ್ಕಳಾಗಲು ಔಷಧಿ ಪಡೆದ ಮಹಿಳೆ ಸ್ಥಿತಿ ಗಂಭೀರ - Mahanayaka
12:07 PM Thursday 12 - December 2024

70 ದಂಪತಿಗಳಿಗೆ ವಂಚಿಸಿದ ನಕಲಿ ವೈದ್ಯೆ: ಮಕ್ಕಳಾಗಲು ಔಷಧಿ ಪಡೆದ ಮಹಿಳೆ ಸ್ಥಿತಿ ಗಂಭೀರ

fake-doctors
28/02/2022

ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಮಕ್ಕಳಿಲ್ಲದ ದಂಪತಿಯನ್ನೇ ಟಾರ್ಗೆಟ್​ ಮಾಡಿ ನಿಮಗೆ ಮಕ್ಕಳಾಗುತ್ತದೆ ಎಂದು ನಂಬಿಸಿ ಲಕ್ಷ ಲಕ್ಷ ವಂಚಿಸುತ್ತಿದ್ದ ನಕಲಿ ವೈದ್ಯರ ತಂಡವನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ವಾಣಿ ಹಾಗೂ ಮಂಜುನಾಥ್ ಎಂಬವರು ಮಕ್ಕಳಿಲ್ಲದ ದಂಪತಿಗೆ ಮೋಸ ಮಾಡಿರುವ ನಕಲಿ ವೈದ್ಯರು. ಆರೋಪಿಗಳು ನಿಮಗೆ ಮಕ್ಕಳಾಗುತ್ತದೆ ಎಂದು ನಂಬಿಸಿದ್ದ ಆರೋಪಿಗಳು ದಂಪತಿ ಬಳಿಯಿಂದ 2ರಿಂದ 5ಲಕ್ಷ ರೂ. ವರೆಗೆ ಪ್ಯಾಕೇಜ್‌ ಲೆಕ್ಕದಲ್ಲಿ ಡೀಲ್ ಮಾಡಿಕೊಂಡಿದ್ದಾರೆ. ಚಿಕಿತ್ಸೆ ಆರಂಭಿಸಿದ ನಕಲಿ ವೈದ್ಯೆ ವಾಣಿ ಇಂಜೆಕ್ಷನ್ ಹಾಗೂ ಪೌಡರ್ ಕೊಟ್ಟು ಯಾವುದೇ ಸ್ಯ್ಕಾನಿಂಗ್ ಮಾಡಿಸದಂತೆ ಕಂಡಿಷನ್​ ಹಾಕಿದ್ದಾರೆ. ಸತತ 6 ತಿಂಗಳಿಂದ ಚಿಕಿತ್ಸೆ ಪಡೆದ ದಂಪತಿಗೆ ನಕಲಿ ವೈದ್ಯೆಯ ಮೇಲೆ ಅನುಮಾನ ಬಂದು ಸ್ಕ್ಯಾನಿಂಗ್ ಮಾಡಿಸಿದಾಗ ತಾವು ಮೋಸ ಹೋಗಿರುವುದು ತಿಳಿದು ಬಂದಿದೆ.

ಈ ಗ್ಯಾಂಗ್​​ ಹೀಗೆ ತಿಪಟೂರು ತಾಲೂಕಿನ‌‌ ಬೆಳಗರಹಳ್ಳಿಯ ಒಂದೇ ಗ್ರಾಮದ ಐದಾರು ಮಹಿಳೆಯರಿಗೆ ವಂಚನೆ ಮಾಡಿದ್ದು, ಐದಾರು ದಂಪತಿಯ ಬಳಿಸುಮಾರು 5 ಲಕ್ಷ ರೂ. ಪಡೆದು ವಂಚಿಸಿದ್ದಾರೆ.
ನಕಲಿ ವೈದ್ಯೆ ಬಳಿ ಇಂಜೆಕ್ಷನ್ ಪಡೆದ ಬಳಿಕ‌ ಮಹಿಳೆಯರ ಆರೋಗ್ಯದಲ್ಲಿ ಏರುಪೇರಾಗಿದ್ದು, ಎರಡೇ ತಿಂಗಳಲ್ಲಿ ಮಹಿಳೆಯರ ದೇಹದಲ್ಲಿ ಬದಲಾವಣೆಯಾಗಿದೆ.

ಇಂಜೆಕ್ಷನ್ ಪಡೆದ ಕೆಲವು ತಿಂಗಳಲ್ಲಿ ‌ಓರ್ವ ಮಹಿಳೆ ಕಿಡ್ನಿ ಸಮಸ್ಯೆ, ಮೆದುಳು ಸಮಸ್ಯೆ, ಹಾಗೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10 ಲಕ್ಷ ರೂ. ಖರ್ಚು ಮಾಡಿದರೂ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ವೇಳೆ ವೈದ್ಯೆಯನ್ನು ಸಂಪರ್ಕ ಮಾಡಲು ಹೋದರೆ ಸಬೂಬು ಹೇಳಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೋಸ ಹೋದ ದಂಪತಿ ದೂರು ನೀಡಿದ್ದು, ಸದ್ಯ ಆರೋಪಿಗಳನ್ನು ತಿಪಟೂರು ತಾಲೂಕು ನೊಣವಿನಕೆರೆ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 10 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನಾಭರಣ ಹಾಗೂ ಡಾಕ್ಟರ್ ಲೋಗೋ ಹಾಕಿಕೊಂಡಿರುವ ಮಹೀಂದ್ರಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ತನಿಖೆಯಲ್ಲಿ ಆರೋಪಿಗಳು ತಿಪಟೂರು ತಾಲೂಕಿನ ಒಂದರಲ್ಲೇ ಬರೋಬ್ಬರಿ 70 ದಂಪತಿಗಳಿಗೆ ಇದೇ ರೀತಿ ವಂಚಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ನಟ ರವಿಚಂದ್ರನ್ ತಾಯಿ ನಿಧನ

ಇಂದು ಸಂಜೆ ದೆಹಲಿ ತಲುಪಲಿರುವ ಭಾರತೀಯರನ್ನು ಹೊತ್ತ 6ನೇ ವಿಮಾನ

ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ: ವಿರೋಧಿಸಿದಕ್ಕೆ ಪತ್ನಿಯ ತಲೆ ಕಡಿದ ಪತಿ

ಚಿಕ್ಕಬಳ್ಳಾಪುರದಲ್ಲಿ ಭಾರೀ ಸ್ಫೋಟ: ಮನೆ ಸಂಪೂರ್ಣ ಛಿದ್ರ; ದಂಪತಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರದಲ್ಲಿ ಭಾರೀ ಸ್ಫೋಟ: ಮನೆ ಸಂಪೂರ್ಣ ಛಿದ್ರ; ದಂಪತಿಗೆ ಗಂಭೀರ ಗಾಯ

 

ಇತ್ತೀಚಿನ ಸುದ್ದಿ