ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹಿಸಿದ್ದ 72 ವರ್ಷದ ವೃದ್ಧ ಅರೆಸ್ಟ್!
ಮಕ್ಕಳ ಅಶ್ಲೀಲತೆಯ ವಿರುದ್ಧ ಭಾರತ ಮಾತ್ರವಲ್ಲದೇ ಇಡೀ ಪ್ರಪಂಚವೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಇದೇ ಸಂದರ್ಭದಲ್ಲಿ 72 ವರ್ಷದ ವೃದ್ಧನೊಬ್ಬ 2.2ಕ್ಕೂ ಹೆಚ್ಚಿನ ಮಕ್ಕಳ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನು ಸಂಗ್ರಹಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಪಾಲ್ ಜಿಟ್ಟೆಲ್ ಎಂಬ ವೃದ್ಧ ಇದೀಗ ಫ್ಲೋರಿಡಾ ಪೊಲೀಸರ ಬಂಧನದಲ್ಲಿದ್ದು, ಈತನ ಮನೆಯ ತುಂಬಾ ಮಕ್ಕಳ ಅಶ್ಲೀಲ ಚಿತ್ರಗಳೇ ಪತ್ತೆಯಾಗಿದ್ದು, ಮುದ್ರಿತ ಚಿತ್ರಗಳನ್ನು ತನ್ನ ಕಚೇರಿ ಹಾಗೂ ಮಲಗುವ ಕೋಣೆಯುದ್ದಕ್ಕೂ ಪೆಟ್ಟಿಕೆಗಳಲ್ಲಿ ಜೋಡಿಸಿರುವುದು ಪತ್ತೆಯಾಗಿದೆ.
ಫೆಬ್ರವರಿ 23ರಂದು ಜೆಟ್ಟಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹಲವಾರು ಮಕ್ಕಳ ದೌರ್ಜನ್ಯದ ವಿಡಿಯೋಗಳನ್ನು ಅಂತರ್ಜಾಲಕ್ಕೆ ಅಪ್ ಲೋಡ್ ಮಾಡಿದ್ದ. ಈತನ ಐಪಿ ಅಡ್ರೆಸ್ ನ ಜಾಡು ಹಿಡಿದು ತೆರಳಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಆರೋಪಿಯ ಮನೆಯಲ್ಲಿರುವ ಮುದ್ರಿತ ವಸ್ತುಗಳು ಹಾಗೂ ಡಿಜಿಟಲ್ ಸಂಗ್ರಹಣೆ ಮತ್ತು ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳನ್ನು ಪಡೆದುಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw