ಯುವತಿಯನ್ನು ಮದುವೆಯಾಗಲು ಮುಂದಾದ ವೃದ್ಧ | ಆ ದಿನ ಯುವತಿ ಮಾಡಿದ ಕೆಲಸ ಏನು ಗೊತ್ತಾ? - Mahanayaka
5:09 PM Thursday 12 - December 2024

ಯುವತಿಯನ್ನು ಮದುವೆಯಾಗಲು ಮುಂದಾದ ವೃದ್ಧ | ಆ ದಿನ ಯುವತಿ ಮಾಡಿದ ಕೆಲಸ ಏನು ಗೊತ್ತಾ?

09/03/2021

ಮುಂಬೈ: ವೃದ್ಧನೋರ್ವ ತನ್ನ 73ನೇ ವರ್ಷ ವಯಸ್ಸಿನಲ್ಲಿ ಮದುವೆಯಾಗಲು ಮುಂದಾಗಿದ್ದಾನೆ. ಒಬ್ಬಂಟಿ ಜೀವನ ಸಾಕೆನಿಸಿ, ತನಗೊಂದು ಸಂಗಾತಿ ಬೇಕೆಂದು ಹುಡುಕುತ್ತಿದ್ದ ವೇಳೆ  ಅವರಿಗೆ ಯುವತಿಯ ಪರಿಚಯವಾಗಿದೆ.

ಈ ಘಟನೆ ಮುಂಬೈನಲ್ಲಿ ನಡೆದಿದೆ. 73 ವರ್ಷದ ಇಲ್ಲಿನ ಮಲಾಡ್ ಮಾಲ್ವಾನಿ ನಿವಾಸಿ ಜೆರೋನ್ ಡಿಸೋಜಾ ಈ ರಿಯಲ್ ಸ್ಟೋರಿಯ ನಾಯಕನಾಗಿದ್ದರೆ, ಶಾಲಿನಿ ಸಿಂಗ್ ಎಂಬ ಯುವತಿ ಖಳನಾಯಕಿಯಾಗಿದ್ದಾಳೆ. 73 ವರ್ಷದ ಜೆರೋನ್ ಅವರು ಮದುವೆಯಾಗಲು ವಧುವನ್ನು ಹುಡುಕುತ್ತಿದ್ದ ವೇಳೆ ಪರಿಚಯವಾದ ಶಾಲಿನಿಯ ಪರಿಚಯವಾಗಿದ್ದು, ಆಕೆಯೂ ಮದುವೆಗೆ ಒಪ್ಪಿಕೊಂಡಿದ್ದಾಳೆ.

ತನ್ನ 73ನೇ ವರ್ಷದಲ್ಲಿಯೂ ಯುವತಿಯೋರ್ವಳು ಮದುವೆಯಾಗಲು ಮುಂದಾಗಿರುವುದು  ಜೆರೋನ್ ಡಿಸೋಜಾ ಅವರಿಗೆ ಸಂತಸವನ್ನು ತಂದಿತ್ತು. ಅಂತೆಯೇ  ಇಬ್ಬರು ಬಹಳ ಹತ್ತಿರವಾಗಿದ್ದಾರೆ. ವೃದ್ಧಾಪ್ಯದಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿದ ಶಾಲಿನಿ 1 ಕೋಟಿ ರೂಪಾಯಿಗಳನ್ನು ಜೆರೋನ್ ಡಿಸೋಜಾ ಬಳಿಯಿಂದ ಪಡೆದುಕೊಂಡಿದ್ದಾಳೆ.

ಇದಾಗಿ ಕೆಲವು ದಿನಗಳ ವರೆಗೆ ಜೆರೋನ್ ಮನೆಯಲ್ಲಿದ್ದ ಶಾಲಿನಿ ಏಕಾಏಕಿ ಅಲ್ಲಿಂದ ಎಸ್ಕೇಪ್ ಆಗಿದ್ದು, ತನ್ನ ಹಳ್ಳಿಗೆ ಹೋಗಿ ಬೇರೊಬ್ಬ ಯುವಕನನ್ನು ಮದುವೆಯಾಗಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಜೆರೋನ್ ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿ