74 ವರ್ಷದ ವೃದ್ಧನಿಂದ ಬಾಲಕಿಯ ಅತ್ಯಾಚಾರ: ನೊಂದ ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣು
ಕೊಟ್ಟಾಯಂ: ವೃದ್ಧನೋರ್ವ 10 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಈ ಘಟನೆಯಿಂದ ತೀವ್ರವಾಗಿ ನೊಂದ ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕೇರಳದ ಕೊಟ್ಟಾಯಂ ಕುರಿಚಿಯಲ್ಲಿ ನಡೆದಿದೆ.
ಸಾಯುವ ವಯಸ್ಸಿನ ಸನಿದಲ್ಲಿದ್ದ 74 ವರ್ಷ ವಯಸ್ಸಿನ ವೃದ್ಧ ಕಾಮುಕ ಯೋಗಿ ದಾಸ್, ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು, ವಸ್ತುಗಳನ್ನು ಖರೀದಿಸಲು ಬಾಲಕಿ ಬಂದಿದ್ದ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೋಕ್ಸೊ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು.
ಆರೋಪಿ ವೃದ್ಧ ಬಾಲಕಿ ಅಂಗಡಿಗೆ ಬಂದಾಗಲೆಲ್ಲ ಆಕೆಯ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಾಗ ಪೋಷಕರು ಆಕೆಯನ್ನು ವಿಚಾರಿಸಿದ್ದು, ಈ ವೇಳೆ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಕೊಟ್ಟಾಯಂ ಮೊಬೈಲ್ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದ ಬಳಿಕ ಬಂಧಿಸಲಾಗಿತ್ತು.
ಆರೋಪಿಯ ಪುತ್ರ ಸ್ಥಳೀಯ ರಾಜಕೀಯ ಮುಖಂಡನಾಗಿದ್ದ. ಹೀಗಾಗಿ ಅಸಹಾಯಕರಾಗಿದ್ದ ಬಾಲಕಿಯ ಕುಟುಂಬಸ್ಥರು ಆರೋಪಿಗಳ ಕುಟುಂಬಕ್ಕೆ ಹೆದರುತ್ತಿದ್ದರು. ಅವರು ರಾಜಿ ಕೂಡ ಮಾಡಿಕೊಳ್ಳಲು ಸಿದ್ಧರಾಗಿರಲಿಲ್ಲ. ಆದರೆ, ಈ ನಡುವೆ ಊರಿನವರು ಬಾಲಕಿಯ ಕುಟುಂಬದ ಬಗ್ಗೆ ನಾನಾ ಕಥೆಗಳನ್ನು ಕಟ್ಟಲು ಆರಂಭಿಸಿದ್ದಾರೆ.
ಬಾಲಕಿಯ ತಂದೆ, ಈ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿಗಳಿಂದ ಹಣ ತೆಗೆದುಕೊಂಡಿದ್ದಾನೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿದ್ದರು. ತನ್ನ ಮಗಳು ಹಾಗೂ ತನ್ನ ಬಗ್ಗೆ ಕೆಟ್ಟದಾಗಿ ಜನರು ಆಡುತ್ತಿರುವ ಮಾತುಗಳನ್ನು ಕೇಳಿ ರೋಸಿ ಹೋದ ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ದಲಿತ ಬಾಲಕಿಯ ಅತ್ಯಾಚಾರ: ಪೊಲೀಸರು, ವೈದ್ಯಾಧಿಕಾರಿಗಳಿಂದ ಕರ್ತವ್ಯ ಲೋಪ | ಯುವ ಕಾಂಗ್ರೆಸ್ ಮುಖಂಡ ಲುಕ್ಮಾನ್ ಬಂಟ್ವಾಳ
ಮಕ್ಕಳನ್ನು ತಲೆ ಕೆಳಗಾಗಿಸಿ ನೇತು ಹಾಕಿ ಕ್ರೌರ್ಯ ಮೆರೆದ ತಂದೆ–ತಾಯಿ
ಜಮೀರ್ ಹೆಗಲಿಗೆ ಬಂದೂಕು ಇರಿಸಿ ರಾಜಕೀಯವಾಗಿ ಅಲ್ಪಸಂಖ್ಯಾತರನ್ನು ಮುಗಿಸಲು ಯತ್ನ: ಶ್ರೀನಾಥ್ ಪೂಜಾರಿ
ತುಂಬಿ ತುಳುಕುತ್ತಿದ್ದ ಬಸ್ ಗೆ ಹತ್ತಿದ ಸಿಎಂನ್ನು ಕಂಡು ಪ್ರಯಾಣಿಕರಿಗೆ ಅಚ್ಚರಿ
3 ಕೋಟಿ ತೆರಿಗೆ ಪಾವತಿಸಿ ಎಂದು ಬಡ ಆಟೋ ಚಾಲಕನಿಗೆ ಐಟಿ ಇಲಾಖೆ ನೋಟಿಸ್!
ಹಿಂದೂ ಪದ್ಧತಿಯ ಆಚರಣೆಗಳೆಂದರೆ ಕಾಂಗ್ರೆಸ್ ಗೆ ಅಲರ್ಜಿ | ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ