ಸರ್ಕಾರದಿಂದ 747 ವೆಬ್ ಸೈಟ್, 94 ಯೂಟ್ಯೂಬ್ ಚಾನೆಲ್ ನಿಷೇಧ!
ಭಾರತ ಸರಕಾರವು ದೇಶದ ಘನತೆಗೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ಡಿಜಿಟಲ್ ಮಾಧ್ಯಮಗಳಿಗೆ ನಿಷೇಧ ಹೇರುವುದನ್ನು ಮುಂದುವರೆಸುತ್ತಿದ್ದು, 2021-22ರಲ್ಲಿ ಒಟ್ಟು ಎಷ್ಟು ವೆಬ್ ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳು ಮತ್ತು ಸೋಷಿಯಲ್ ಮೀಡಿಯಾಗಳಿಗೆ ನಿಷೇಧ ಹೇರಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕೇಂದ್ರ ಸಚಿವ ಅನುರಾಗ್ ಠಾಕೂರ್ ನೀಡಿದ ಮಾಹಿತಿ ಪ್ರಕಾರ, 2021-22ರಲ್ಲಿ ಒಟ್ಟು 747 ವೆಬ್ ಸೈಟ್‌ಗಳು, 94 ಯೂಟ್ಯೂಬ್ ಚಾನೆಲ್‌ಗಳು ಮತ್ತು 19 ಸೋಷಿಯಲ್ ಮೀಡಿಯಾ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ರಾಜ್ಯಸಭೆಗೆ ಲಿಖಿತ ಹೇಳಿಕೆ ನೀಡಿದ ಅವರು, ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ 69A ಅಡಿಯಲ್ಲಿ ಇವುಗಳಿಗೆ ನಿಷೇಧ ಹೇರಳಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶದ ಸಾರ್ವಭಾಮತ್ವಕ್ಕೆ ಧಕ್ಕೆ ತರುವ ಏಜೆನ್ಸಿಗಳ ವಿರುದ್ಧ ಭಾರತವು ಕಠಿಣ ಕ್ರಮಕೈಗೊಳ್ಳಲಿದೆ. ಇದೇ ರೀತಿ ಇಂಟರ್ ನೆಟ್ ನಲ್ಲಿ ಸುಳ್ಳುಸುದ್ದಿ ಮತ್ತು ಪ್ರೊಪಗಾಂಡವನ್ನು ಹೊಂದಿರುವ, ಸುಳ್ಳು ಮಾಹಿತಿಗಳಿಂದ ಜನರ ದಾರಿತಪ್ಪಿಸುವ ವೆಬ್ ಸೈಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಭಾರತದ ವಿರುದ್ಧ ಅಪಪ್ರಚಾರ, ಭಾರತ ವಿರೋಧಿ ಪ್ರಚಾರ, ನಕಲಿ ಸುದ್ದಿಗಳನ್ನು ಹರಡುವ 22 ಯೂಟ್ಯೂಬ್ ಸುದ್ದಿ ಚಾನೆಲ್ ಗಳನ್ನು ಕೆಲವು ತಿಂಗಳ ಹಿಂದೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನಿಷೇಧಿಸಿತ್ತು. ಇವುಗಳಲ್ಲಿ ನಾಲ್ಕು ಚಾನೆಲ್‌ಗಳು ಪಾಕಿಸ್ತಾನ ಮೂಲದ್ದಾಗಿತ್ತು. ಉಳಿದ 18 ಚಾನೆಲ್‌ಗಳು ಭಾರತ ಮೂಲದ್ದಾಗಿದ್ದವು.
ಈ ಚಾನೆಲ್ ಗಳು ಕಾಶ್ಮೀರ, ಭಾರತೀಯ ಸೇನೆ, ಹಿಂದೂ ಮತ್ತು ಮುಸ್ಲಿಂ ಇತ್ಯಾದಿ ಸೂಕ್ಷ್ಮ ವಿಷಯಗಳ ಕುರಿತು ತಪ್ಪು ಮಾಹಿತಿ ನೀಡುತ್ತಿದ್ದವು ಎಂದು ಸಚಿವಾಲಯವು ಮಾಹಿತಿ ನೀಡಿತ್ತು.
ಇದೇ ರೀತಿ ಭಾರತ ಸರಕಾರವು ವಿದೇಶಿ ಆಪ್ ಗಳ ಮೇಲೂ ಕಣ್ಣಿಟ್ಟಿದ್ದು, ಹಲವು ಚೀನಿ ಆಪ್ ಗಳನ್ನು ನಿಷೇಧಿಸಿದೆ. ಚೀನಾ ಮೂಲದ ಆಪ್ ಗಳು ಭಾರತದಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಸರ್ಕಾರವು ಅನುಮಾನದಿಂದ ನೋಡುತ್ತಿದೆ. ದೇಶದ ಹಿತದೃಷ್ಟಿಯಿಂದ ಇಂತಹ ಆಪ್ ಗಳನ್ನು ನಿಷೇಧಿಸಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka