7,500 ಕೆ.ಜಿ. ಹಳೆಯ ಮೀನು ವಶಕ್ಕೆ ಪಡೆದುಕೊಂಡ ಆಹಾರ ಸುರಕ್ಷತಾ ಅಧಿಕಾರಿಗಳು: ಮೀನಿನಲ್ಲೂ ವಿಷ!
ತಿರುವನಂತಪುರಂ: ಅಂಜುತೆಂಗು ಎಂಬಲ್ಲಿ ಸುಮಾರು 7,500 ಕೆ.ಜಿ. ಹಳೆಯ ಮೀನು ವಶಪಡಿಸಿಕೊಳ್ಳಲಾಗಿದೆ. ಗೋವಾ ಮತ್ತು ತಮಿಳುನಾಡಿನಿಂದ ಮೀನು ತರಲಾಗಿದ್ದು, ಮೀನಿನಲ್ಲಿ ಅಮೋನಿಯ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಎಂ.ಜೆ.ಮೀನು ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಮೊನ್ನೆಯಷ್ಟೆ ನೀಂಡಕರ ಬಂದರಿನಲ್ಲಿ ಬೋಟ್ ಗಳಲ್ಲಿ ತಪಾಸಣೆ ನಡೆಸಿದಾಗ ಆಹಾರ ಸುರಕ್ಷತಾ ಇಲಾಖೆ 500 ಕೆ.ಜಿ. ಹಳಸಿದ ಮೀನುಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿತ್ತು.ಬಂದರಿಗೆ ಮೀನಿನೊಂದಿಗೆ ಬಂದ ಹತ್ತು ದೋಣಿಗಳಲ್ಲಿ ತಪಾಸಣೆ ನಡೆಸಲಾಗಿತ್ತು.
ಮೀನುಗಳು ಹಾಳಾಗದಂತೆ ಕಾಪಾಡಲು ಅಮೋನಿಯ ಬಳಸಲಾಗುತ್ತಿದ್ದು, ಈ ಮೀನುಗಳನ್ನು ಖರೀದಿಸಿ ಸೇವಿಸುವ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಲವು ಘಟನೆಗಳು ನಡೆದಿವೆ. ಮೀನು ದೀರ್ಘ ಕಾಲ ಹಾಳಾಗದಂತೆ ಇಟ್ಟು ಲಾಭಗಳಿಸುವ ಮೀನು ಸರಬರಾಜುದಾರರು ಸಾರ್ವಜನಿಕರ ಆರೋಗ್ಯದ ಬಗ್ಗೆ ಚಿಂತಿಸದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈ ಮೀನುಗಳನ್ನು ಖದೀರಿಸಿ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದು, ಇದರಿಂದಾಗಿ ವ್ಯಾಪಾರಿಗಳಿಗೆ ಕೂಡ ತೊಂದರೆಯಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪ್ರವಾದಿ ವಿರುದ್ಧ ಹೇಳಿಕೆ: ಮುಸ್ಲಿಮ್ ರಾಷ್ಟ್ರಗಳ ಖಂಡನೆ ಬೆನ್ನಲ್ಲೇ ತನ್ನ ನಿಲುವು ಸ್ಪಷ್ಟಪಡಿಸಿದ ಭಾರತ
ವಿದ್ಯುತ್ ಕಂಬಕ್ಕೆ ದನದ ಬುರುಡೆ ಕಟ್ಟಿದ ಕಿಡಿಗೇಡಿಗಳು!
ಬಸ್ ಗಾಗಿ ಕಾಯುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ
ಕೊರಿಯನ್ ವಿಡಿಯೋ ನೋಡುವ ಚಟದಿಂದ ಹೊರಬರಲಾಗದೇ ಆತ್ಮಹತ್ಯೆಗೆ ಶರಣಾದ ಬಾಲಕಿ!